Publish Date: Fri, 23 Aug 2019 (15:36 IST)
Updated Date: Fri, 23 Aug 2019 (15:37 IST)
ಪ್ರಶ್ನೆ: ಸರ್, ನಾನು ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಆದರೆ ಈವರೆಗೂ ಮಗು ಆಗಿಲ್ಲ. ಗಂಡನಿಂದ ನನಗೆ ಸಂಪೂರ್ಣ ಸುಖ ಸಿಗುತ್ತಿಲ್ಲ. ಮದುವೆಯಾದ ಹೊಸತರಲ್ಲಿ ಕೆಲವೇ ತಿಂಗಳು ನಾವಿಬ್ಬರೂ ಚೆನ್ನಾಗಿದ್ದೇವು. ಆ ಬಳಿಕ ಅವರು ಹೆಚ್ಚಿಗೆ ಟೂರ್ ಮೇಲಿರುತ್ತಾರೆ. ನನಗೆ ಸಮಯ ಕೊಡುತ್ತಿಲ್ಲ.
ಈ ನಡುವೆ ನಾನು ನಮ್ಮ ಮನೆ ಮುಂದಿನ ಅಪಾರ್ಟಮೆಂಟಿಗೆ ಬಂದಿರೋ ಯುವಕನೊಬ್ಬನನ್ನು ಪ್ರೀತಿಸೋಕೆ ಶುರುಮಾಡಿರುವೆ. ಅವನಿಗೆ ಪರಿಚಯವಾಗಿ ಕೆಲವೇ ದಿನಗಳಲ್ಲಿ ಮೈ, ಮನ ಕೊಟ್ಟಿರುವೆ. ನನ್ನ ಗಂಡನಿಗಿಂತ ಪ್ರಿಯಕರನೇ ಹೆಚ್ಚಿನ ಸುಖ ಕೊಡುತ್ತಿದ್ದಾನೆ. ನಾನು ಗಂಡನೊಂದಿಗೆ ಇರಲಾ? ಗೆಳೆಯನೊಂದಿಗೆ ಇರಲಾ?
ಉತ್ತರ: ನಿಮ್ಮ ಭವಿಷ್ಯ ನಿರ್ಧಾರ ನಿಮ್ಮ ಕೈಯಲ್ಲೇ ಇದೆ. ಅಲ್ಪಕಾಲದ ಕಾಮ ಸುಖಕ್ಕೆ ನಿಮ್ಮ ಭವಿಷ್ಯವನ್ನು ಬಲಿಕೊಡಬೇಡಿ. ಮದುವೆಯಾದ ಮೇಲೆ ಗಂಡನಿಗೆ ಸರ್ವಸ್ವ ಅರ್ಪಿಸಬೇಕು ಎಂಬುದನ್ನ ಮರೆತಿರುವ ನೀವು, ನಿಮಗರಿವಿಲ್ಲದಂತೆ ನಿಮ್ಮ ಕಾಲ ಮೇಲೆ ಕಲ್ಲು ಎಳೆದುಕೊಂಡಿದ್ದೀರಿ.
ಗಂಡ ಬೇಕೋ ಅಥವಾ ಇನಿಯ ಬೇಕು ಎಂಬುದನ್ನು ನೀವೇ ನಿರ್ಧರಿಸಿ.