Publish Date: Tue, 20 Aug 2019 (19:00 IST)
Updated Date: Tue, 20 Aug 2019 (19:02 IST)
ಬಟ್ಟೆ ತೊಳೆಯಲು ಹೋಗಿದ್ದ ಬಾಲಕಿಯೊಬ್ಬಳ ಮೇಲೆ ಕಾಮುಕನೊಬ್ಬ ಎರಗಿ ಮಾಡಬಾರದ ಕೆಲಸ ಮಾಡಿದ್ದಾನೆ.
ಅಪ್ರಾಪ್ತ ಬಾಲಕಿಯನ್ನು ಬೆದಿರಿಸಿ ಅತ್ಯಾಚಾರ ಮಾಡಿದ್ದಾನೆ. ಜೀವ ಬೆದರಿಕೆಯೊಡ್ಡಿ ಬಾಲಕಿ ಮೇಲೆ ಅತ್ಯಾಚಾರೆ ನಡೆಸಿದ್ದಾನೆ ಕಾಮುಕ.
ಬಟ್ಟೆ ತೊಳೆಯಲು ಹೋಗಿದ್ದ ಬಾಲಕಿ ಮೇಲೆ ಎರಗಿದ ಕಾಮುಕನನ್ನು ಅಕ್ಷಯ್ ಮಹಾದೇವ ಸಾಳುಂಕೆ ಎಂದು ಗುರುತಿಸಲಾಗಿದ್ದು, ಈತನೇ ಅತ್ಯಾಚಾರವೆಸಗಿದ್ದಾನೆ ಎಂದು ದೂರು ನೀಡಲಾಗಿದೆ.
ಮನೆಗೆ ಬಂದು ಪೋಷಕರ ಮುಂದೆ ಅಳಲು ತೋಡಿಕೊಂಡಿದ್ದಾಳೆ ಬಾಲಕಿ.
ಪೋಷಕರ ದೂರಿನ ಮೇರೆಗೆ ಫೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ನಿಪ್ಪಾಣಿ ಪೊಲೀಸರಿಂದ ಆರೋಪಿ ಅಕ್ಷಯ್ ಬಂಧನವಾಗಿದ್ದು, ನಿಪ್ಪಾಣಿ ಶಹರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.