Select Your Language

Notifications

webdunia
webdunia
webdunia
webdunia

ಡೆಂಗ್ಯುಗೆ ಶಾಲಾ ಬಾಲಕಿ ಬಲಿ, ತಂಗಿ ಗಂಭೀರ

ಡೆಂಗ್ಯು
ಡೆಂಗ್ಯೂ ಜ್ವರಕ್ಕೆ ಶಾಲಾ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು, ಆಕೆಯ ಸಹೋದರಿ ಅಸ್ವಸ್ಥಗೊಂಡಿರೋ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ  ಅಗಸರಹಳ್ಳಿ ಗ್ರಾಮದ ರವಿಕುಮಾರ್ -ರಾಣಿ ದಂಪತಿಯ ಪುತ್ರಿ ಕೆ.ಆರ್.ಪೇಟೆ ಪಟ್ಟಣದ ಪ್ರಿಯದರ್ಶಿನಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹೇಮಾವತಿ(7) ಮೃತ ದುರ್ದೈವಿಯಾಗಿದ್ದಾರೆ.

ಈಕೆಯ ಸಹೋದರಿ ಪ್ರೇರಣ(5) ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೆಎಸ್ ಎಸ್ ಆಸ್ಪತ್ರೆಯಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಹೇಮಾವತಿ ಮತ್ತು ಪ್ರೇರಣಾ ಸಹೋದರಿಯರು ಚಿಕಿತ್ಸೆ ಪಡೆಯುತ್ತಿದ್ದರು. 

ವೈದ್ಯರ ಸಲಹೆ ಮೇರೆಗೆ ಅಪೋಲೋ ಆಸ್ಪತ್ರೆಯಲ್ಲಿ ಸ್ಥಳಾಂತರಿಸಿ ಚಿಕಿತ್ಸೆ ಪಡೆಯುತ್ತಿದ್ದರು.

ಹೇಮಾವತಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರೆ ಈಕೆಯ ಸಹೋದರಿ ತೀವ್ರವಾಗಿ ಅಸ್ವಸ್ಥರಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಅಗಸರಹಳ್ಳಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಕೈಯಲ್ಲಿ ಚೇಳು ಹಿಡಿದು ಜಾತ್ರೆ ಮಾಡಿದ್ದು ಏಕೆ?