Select Your Language

Notifications

webdunia
webdunia
webdunia
webdunia

‘ಶಿರೂರು ಶ್ರೀ ಅಸಹಜ ಸಾವಿಗೆ ನ್ಯಾಯ ಸಿಕ್ಕಿಲ್ಲ’

‘ಶಿರೂರು ಶ್ರೀ ಅಸಹಜ ಸಾವಿಗೆ ನ್ಯಾಯ ಸಿಕ್ಕಿಲ್ಲ’
ಉಡುಪಿ , ಶನಿವಾರ, 20 ಜುಲೈ 2019 (16:24 IST)
ಶಿರೂರು ಶ್ರೀಗಳು ಮೃತರಾಗಿ ಒಂದು ವರ್ಷ ಕಳೆದಿದೆ. ಆದರೆ ಇನ್ನೂ ಇನ್ನು ಅವ್ರ ಮರಣದ ಬಗ್ಗೆ ನ್ಯಾಯ ದೊರತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಶಿರೂರು ಮಠಾಧೀಶರ ಆಪ್ತರು ಆಗಿರುವ ರವಿಕಿರಣ್ ಮುರ್ಡೇಶ್ವರ ರವರು ಈ ರೀತಿ ಬೇಸರ ವ್ಯಕ್ತಪಡಿಸಿದ್ದಾರೆ.

ಶಿರೂರು ಲಕ್ಷ್ಮೀವರತೀರ್ಥ ಶ್ರೀಪಾದರು ವೃಂದಾವನಸ್ಥರಾಗಿ ಒಂದು ವರ್ಷ ಕಳೆದಿದೆ. ಈ ಹಿನ್ನಲೆಯಲ್ಲಿ ಶಿರೂರು ಶ್ರೀಗಳ ಅಭಿಮಾನಿಗಳು ಉಪ್ಪೂರಿನ ಸ್ಪಂದನ ವಿಶೇಷ ಮಕ್ಕಳ ಆಶ್ರಮದಲ್ಲಿ ಶ್ರೀಗಳ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿರೂರು ಸ್ವಾಮೀಜಿಗಳದ್ದು  ಅಸಹಜ ಸಾವು. ಆದರೆ ಅದರ ತನಿಖೆ ಹಳ್ಳ ಹಿಡಿದಿದೆ.

webdunia
ಆಗಸ್ಟ್ 10 ರಂದು ಉದಾರಂಗದಲ್ಲಿ ವಿಷ ಉಂಟು  ಎಂದು ಟೆಸ್ಟ್ ಮಾಡುತ್ತಾರೆ. ಆದರೆ ನಂತರ ಮುಂದಿನ ಪ್ರಕ್ರಿಯೆ ಆಮೆ ಗತಿಯಲ್ಲಿ ನಡೆದ ಕಾರಣ  ತನಿಖೆಯಲ್ಲಿ ವಿಷ ಕಂಡು ಬಂದಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯ ಹೇಳಿದೆ.  ಈ ಎರಡು ವರದಿಯನ್ನು ಕ್ರೋಢಿಕರಿಸಿ ಸ್ವಾಭಾವಿಕ ಮರಣ ಎಂದು ವರದಿ ನೀಡುತ್ತಾರೆ. ಸ್ವಾಮಿಗಳದ್ದು ರೋಗಗ್ರಸ್ಥ ಕಿಡ್ನಿಯಲ್ಲ ಬದಲಿಗೆ ಗಾಯಗೊಂಡ ಕಿಡ್ನಿ. ನಳದಲ್ಲಿ ರಕ್ತ ಸ್ರಾವ ಆಗಿದೆ. ಇದರಿಂದ ಸ್ವಾಮೀಜಿಯ ಸಾವು ಆಗಿದೆ. ಸ್ವಾಮೀಜಿಯ ಸುತ್ತ ವಿವಾದ ಇತ್ತು. ಹಾಗಾಗಿ ಅವರ ಸಾವಿನ ಬಗ್ಗೆಯೂ ಅನೇಕ ಸಂಶಗಳು ಎದ್ದಿದೆ ಎಂದರು.  

ಆಗಸ್ಟ್ 13 ರಂದು ಡಿವೈಎಸ್ಪಿ ಮಾಡಿದ ಪತ್ರವ್ಯವಹಾರ ದಲ್ಲಿಯೂ ವೈದ್ಯರು ಅದನ್ನೇ ಹೇಳಿದ್ದಾರೆ. ವಿಷಪ್ರಾಶಣ ಆಗಿದೆಂಬ ಹೇಳಿಕೆಗೆ ಬದ್ಧರಾಗಿದ್ದರು. ಇದನೆಲ್ಲ ನೋಡಿದಾಗ ಪ್ರಕರಣ ಹಳ್ಳ ಹಿಡಿದಿಲ್ಲ. ಜೀವಂತವಾಗಿದೆ. ಆದರೆ ಮುಂದುವರಿಸುವವರು ಯಾರು ? ಎಂದರು.  


Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈನಲ್ಲಿ ಹೈಡ್ರಾಮಾ: ಶ್ರೀಮಂತ ಪಾಟೀಲ್ ಭೇಟಿಗೆ ಮುಂದಾದ ಕಾಂಗ್ರೆಸ್ ಶಾಸಕಿ