ದಂಪತಿಗಳನ್ನು ಅವರ ಮನೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
									
										
								
																	ಈ ಘಟನೆ ಮಂಡ್ಯ ಪಟ್ಟಣದ ರಾಯಸಮುದ್ರ ಗ್ರಾಮದಲ್ಲಿ ನಡೆದಿದೆ. ರಾಯಸಮುದ್ರ ಗ್ರಾಮದ ಗುಂಡಣ್ಣ (50) ಮತ್ತು  ಲಲಿತಮ್ಮ (45) ಕೊಲೆಯಾದ ದಂಪತಿ.
									
			
			 
 			
 
 			
					
			        							
								
																	ಕಳೆದ ಎರಡು ದಿನಗಳಿಂದ ಮನೆಗೆ ಬೀಗ ಹಾಕಿದ ಸ್ಥಿತಿಯಲ್ಲಿತ್ತು. ಆಗ ಅಕ್ಕಪಕ್ಕದ ಮನೆಯವರು ಕಿಟಕಿಯಲ್ಲಿ ಮನೆಯೊಳಗೆ ಏನಾಗಿದೆ ಎಂದು ನೋಡಿದ್ದಾರೆ. ಆಗ ದಂಪತಿಗಳು ಬರ್ಬರವಾಗಿ ಕೊಲೆಯಾಗಿ ಇರುವುದು ಕಂಡುಬಂದಿದೆ.
									
										
								
																	ಕೂಡಲೇ ಪಟ್ಟಣ ಪೊಲೀಸರಿಗೆ ರಾಯಸಮುದ್ರ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ  ಸರ್ಕಲ್ ಇನ್ಸ್ಪೆಕ್ಟರ್ ಸುಧಾಕರ್, ಕೆ .ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
									
											
							                     
							
							
			        							
								
																	ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ದಂಪತಿಗಳಾದ ರಾಯಸಮುದ್ರ ಗುಂಡಣ್ಣ ಮತ್ತು ಲಲಿತಮ್ಮ  ಅವರನ್ನು ಹತ್ಯೆ  ಮಾಡಿರುವ  ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪೊಲೀಸರನ್ನು ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಒತ್ತಾಯ ಮಾಡಿದ್ದಾರೆ.