ಪಬ್ಲಿಕ್ ನಲ್ಲಿ ಆ ಕೆಲಸ ಮಾಡಿದ್ದಕ್ಕೆ ಕೊಂದೇ ಬಿಡೋದಾ?

ಮಂಗಳವಾರ, 16 ಜುಲೈ 2019 (16:55 IST)
ಯುವಕನೊಬ್ಬನನ್ನು ಸಾರ್ವಜನಿಕ ಪ್ರದೇಶದಲ್ಲಿ ಆ ಕೆಲಸ ಮಾಡಿದ್ದಕ್ಕೆ ಕೊಲೆ ಮಾಡಲಾಗಿದೆ.

ಕ್ಷುಲ್ಲಕ ಕಾರಣಕ್ಕಾಗಿ ಯುವಕನೊಬ್ಬನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಅಂಕಿತ್ ಕೊಲೆಯಾದ ದುರ್ದೈವಿಯಾಗಿದ್ದು, ದೆಹಲಿಯ ತಿಲಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಿದ್ದೇ ಅಂಕಿತ್ ಕೊಲೆಯಾಗಲ ಕಾರಣವಾಗಿದೆ. ಅಂಕಿತ್ ಹಾಗೂ ಆ ಪ್ರದೇಶದ ನಿವಾಸಿ ರವಿ ನಡುವೆ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ವಾಗ್ವಾದ ನಡೆದಿದೆ. ಆಗ ರವಿ ಎಂಬಾತ ಅಂಕಿತ್ ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಪ್ರಕರಣದಲ್ಲಿ ರವಿ ಯ ಸ್ನೇಹಿತರ ಕೈವಾಡ ಇದೆಯಾ ಅನ್ನೋ ಕುರಿತು ಪೊಲೀಸರು ತನಿಖೆ ಶುರುಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೇವಾಲಯದಲ್ಲಿದವನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ಯಾಕೆ?