Select Your Language

Notifications

webdunia
webdunia
webdunia
Thursday, 10 April 2025
webdunia

ಬಿಜೆಪಿ ಗಡಗಡ : ಹೊತ್ತಿ ಉರಿಯುತ್ತಿರೋ ಮುಖಂಡರ ಆಕ್ರೋಶ

ಸಿಎಂ
ಚಿತ್ರದುರ್ಗ , ಮಂಗಳವಾರ, 20 ಆಗಸ್ಟ್ 2019 (18:54 IST)
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರದ ಮಂತ್ರಿಮಂಡಲ ರಚನೆಯಲ್ಲಿ ತಮ್ಮನ್ನ ಕೈ ಬಿಟ್ಟಿದ್ದಕ್ಕೆ ಕಮಲ ಪಡೆ ಶಾಸಕರು ಗರಂ ಆಗಿದ್ದಾರೆ. ಇತ್ತ ಶಾಸಕರ ಬೆಂಬಲಿಗರು ಅಲ್ಲಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ತಿಪ್ಪಾರೆಡ್ಡಿ ಗೆ ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ಪಲ್ಸರ್ ಬೈಕ್ ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹಿರಿಯ ಶಾಸಕರಾಗಿರೋ ತಿಪ್ಪಾರೆಡ್ಡಿಯವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಮಲ ಪಡೆ ಕಾರ್ಯಕರ್ತರು ಆಗ್ರಹ ಮಾಡಿದ್ದಾರೆ.

ಇನ್ನು ಹಲವೆಡೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಗಳು ಮುಂದುವರಿದಿವೆ.  ತಮ್ಮನ್ನು ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಅಸಮಧಾನವನ್ನು ಹಲವಾರು ಶಾಸಕರು ಹೊರಹಾಕುತ್ತಿದ್ದು, ಇದು ಬಿ.ಎಸ್.ವೈಗೆ ಬಿಸಿ ತುಪ್ಪವಾಗಿ ಪರಿಣಮಿಸಲಿದೆ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಸಿದ ಇಸ್ಲಾಂನನ್ನ ಚೂರಿ ಚುಚ್ಚಿ ಕೊಂದದ್ದು ಯಾರು?