Publish Date: Tue, 20 Aug 2019 (18:20 IST)
Updated Date: Tue, 20 Aug 2019 (18:22 IST)
ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿಯ ಅಳಿಯರೊಬ್ಬರನ್ನು ಬಂಧನ ಮಾಡಲಾಗಿದೆ.
ಜಾರಿ ನಿರ್ದೇಶನಾಲಯದಿಂದ ಮುಖ್ಯಮಂತ್ರಿಯ ಸೋದರಳಿಯನನ್ನು ಬಂಧನ ಮಾಡಲಾಗಿದೆ. 300 ಕ್ಕೂ ಅಧಿಕ ಕೋಟಿ ಹಣ ಬ್ಯಾಂಕಿಗೆ ವಂಚನೆ ಮಾಡಿರೋ ಆರೋಪ ಹಿನ್ನೆಲೆಯಲ್ಲಿ ಈ ಬಂಧನ ಮಾಡಲಾಗಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಮಧ್ಯಪ್ರದೇಶದ ಸಿಎಂ ಕಮಲನಾಥ್ ಅವರ ಸೋದರಳಿಯ ರತುಲ್ ಪುರಿ ಎಂಬೋರು ಬರೋಬ್ಬರಿ 354 ಕೋಟಿ ವಂಚನೆ ಮಾಡಿದ್ದಾರೆ ಎಂದು ಬ್ಯಾಂಕ್ ಸಿಬಿಐಗೆ ದೂರು ನೀಡಿದೆ.
ನಕಲಿ ದಾಖಲೆ ನೀಡಿ ಬ್ಯಾಂಕಿಗೆ ವಂಚಿಸಿರೋ ಹಿನ್ನೆಲೆಯಲ್ಲಿ ಬ್ಯಾಂಕ್ ಆಡಳಿತ ಮಂಡಳಿ ದೂರು ನೀಡಿದ್ದು, ಸಿಎಂ ಅಳಿಯನನ್ನು ತೀವ್ರ ತನಿಖೆಗೆ ಒಳಪಡಿಸಲಾಗುತ್ತಿದೆ.