ಬೆಟ್ಟದ ಮೇಲೆ ಪ್ರತ್ಯಕ್ಷವಾಗಿರೋ ಅದನ್ನು ಕಂಡಿರೋ ಜನರು ಹಗಲು, ರಾತ್ರಿ ಜೀವ ಭಯದಲ್ಲಿ ಕಾಲ ಕಳೆಯುವಂತಾಗಿದೆ.
ಕಳೆದ ಎಂಟು ದಿನಗಳ ಹಿಂದೆ ಬೆಟ್ಟದ ಮೇಲೆ ಪ್ರತ್ಯಕ್ಷವಾಗಿದ್ದ ಚಿರತೆಯೊಂದು, ಇದೀಗ ಏಕಾಏಕಿ ಗ್ರಾಮದಲ್ಲಿ ಕಂಡು ಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಉಪ್ಪರಪೇಟೆ ಗ್ರಾಮದ ಜನರ ನಿದ್ದೆ ಗೆಡಿಸಿದೆ.
ಕಳೆದ ಎಂಟು ದಿನಗಳಿಂದ ಚಿರತೆಯೊಂದು ಪ್ರತ್ಯಕ್ಷವಾಗಿ ಗ್ರಾಮಸ್ಥರಿಗೆ ಹಾಗೂ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನಿಸುತ್ತಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಉಪ್ಪರಪೇಟೆ ಗ್ರಾಮದ ಬಳಿ ಕಂಡು ಬಂದಿದೆ. ಬೆಟ್ಟದ ಮೇಲೆ ಪ್ರತ್ಯಕ್ಷವಾದ ಚಿರತೆ ಏಕಾಏಕಿ ಗ್ರಾಮದಲ್ಲಿ ಕಂಡು ಬಂದಿದ್ದು, ಗ್ರಾಮಸ್ಥರ ನಿದ್ದೆಯನ್ನು ಕೆಡಿಸಿದೆ. ಈಗಾಗಲೇ ಮೇಕೆಯೊಂದನ್ನು ಕೊಂದು ಪರಾರಿಯಾದ ಚಿರತೆಯನ್ನು ಹಿಡಿಯಲು ಗ್ರಾಮಸ್ಥರು ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಚಿರತೆಯನ್ನು ಬಂಧಿಸಲು ಬೋನ್ ಗಳನ್ನು ಏರ್ಪಡಿಸಿ, ಅದರೊಳಗೆ ನಾಯಿ ಹಾಗೂ ಮೇಕೆಗಳನ್ನು ಇಡಲಾಗಿದೆ. ಬೆಟ್ಟದ ಮೇಲೆ ಕಂಡ ಚಿರತೆ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದು, ಸದ್ಯ ಗ್ರಾಮಕ್ಕೆ ಎಂಟ್ರಿ ಕೊಟ್ಟ ಚಿರತೆಯಿಂದ ಗ್ರಾಮಸ್ಥರು ಸೇರಿದಂತೆ ಸುತ್ತಮತ್ತಲಿನ ಗ್ರಾಮಗಳಲ್ಲಿನ ಜನತೆ ಮನೆಯಿಂದ ಹೊರಬರಲು ಭಯಭೀತರಾಗಿದ್ದಾರೆ. ಬೋನಿನಲ್ಲಿ ಚಿರತೆ ಸೆರೆಯಾದ್ರೆ ಸಾಕಪ್ಪ ಎಂದು ನಿಟ್ಟು ಉಸಿರು ಬಿಡುತ್ತಿದ್ದಾರೆ.