Publish Date: Tue, 02 Jul 2019 (15:27 IST)
Updated Date: Tue, 02 Jul 2019 (15:30 IST)
ಆಹಾರ ಹಾಗೂ ನೀರನ್ನು ಅರಸುತ್ತಾ ಕಾಡಾನೆಗಳು ಬಂದಿರುವುದರಿಂದ ಅಲ್ಲಿನ ಜನರು ಭಯ ಭೀತರಾಗಿದ್ದಾರೆ.
ಕಾಡಿನಿಂದ ಆಹಾರ ಹಾಗೂ ನೀರನ್ನು ಅರಸಿ ಆನೇಕಲ್ ಹತ್ತಿರದ ಗಡಿ ಅಂಚಿನ ಡ್ಯಾಂಗೆ ಕಾಡಾನೆಗಳು ಬಂದಿವೆ.
ಕರ್ನಾಟಕ- ತಮಿಳುನಾಡು ಗಡಿ ಆನೇಕಲ್ ಸಮೀಪದ ಅವಲಹಳ್ಳಿ ಡ್ಯಾಂಗೆ ಬಂದಿವೆ ಆನೆಗಳು.
ಎರಡು ಕಾಡಾನೆಗಳನ್ನು ಕಂಡು ಸುತ್ತಮುತ್ತಲಿನ ಜನರು ಭಯಗೊಂಡಿದ್ದಾರೆ. ಕೋಲಾರದಿಂದ ತಮಿಳುನಾಡಿನ ಭಾಗಕ್ಕೆ ಬಂದಿರುವ ಆನೆಗಳನ್ನು ನೋಡಲು ಮುಗಿಬಿದ್ದಿದ್ದಾರೆ ಗ್ರಾಮಸ್ಥರು.
ಡ್ಯಾಂನಲ್ಲೆ ಕಾಲ ಕಳೆಯುತ್ತಾ ವಿಶ್ರಾಂತಿ ಪಡೆಯುತ್ತಿವೆ ಆನೆಗಳು. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿದ್ದಾರೆ.
ಕಾಡಿಗೆ ಆನೆಗಳನ್ನು ಓಡಿಸುವ ಕೆಲಸ ಮಾಡುತ್ತಿದ್ದಾರೆ ಅರಣ್ಯ ಸಿಬ್ಬಂದಿ.