Select Your Language

Notifications

webdunia
webdunia
webdunia
webdunia

ಗುಜರಾತ್ ಮಾಡೆಲ್, ಹಾಲಿ ಶಾಸಕರಿಗೆ ಶಾಕ್ ಕೊಡುತ್ತಾ ಹೈಕಮಾಂಡ್ ..?

ಗುಜರಾತ್ ಮಾಡೆಲ್, ಹಾಲಿ ಶಾಸಕರಿಗೆ ಶಾಕ್ ಕೊಡುತ್ತಾ  ಹೈಕಮಾಂಡ್ ..?
bangalore , ಭಾನುವಾರ, 9 ಏಪ್ರಿಲ್ 2023 (18:30 IST)
ರಾಜ್ಯ ವಿಧಾನಸಭಾ ಚುನಾವಣೆಯ ಅಖಾಡಕ್ಕೆ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಮೂರು ಪಕ್ಷಗಳ ನಾಯಕರು ಭರ್ಜರಿ ತಯಾರಿ ನಡೆಸ್ತಿದ್ದಾರೆ. ಈಗಾಗಲೇ  ಕಾಂಗ್ರೆಸ್ ಪಟ್ಟಿ ರಿಲೀಸ್ ಆದರೂ ಕೂಡ ಬಿಜೆಪಿ ಪಟ್ಟಿ ರಿಲೀಸ್ ತಡವಾಗಿದೆ. ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ  ಇಂದು ಸಂಜೆ ದೆಹಲಿಗೆ ಹಿಂತುರಗಲಿದ್ದು, ಇಂದು ರಾತ್ರಿ ಅಥವಾ ನಾಳೆ ಪಟ್ಟಿ ರಿಲೀಸ್ ಆಗಲಿದೆ  ಹೇಳಲಾಗುತ್ತಿದೆ. ಗುಜರಾತ್ ಮಾದರಿಯಲ್ಲಿ ಅನೇಕ ಹಾಲಿ ಶಾಸಕರಿಗೆ ಕೋಕ್ ಕೊಡಲಾಗುತ್ತದೆ ಅನ್ನೊ ಚರ್ಚೆ ಕೂಡ ಆರಂಭವಾಗಿದೆ . ಜೊತೆಗೆ ಹಲವು ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ ಶುರುವಾಗಿದೆ.

ರಾಜ್ಯ ವಿದಾನಸಭಾ ಚುನಾವಣೆಯ ಸಿದ್ದತೆಯಲ್ಲಿರುವ ಕೇಸರಿ ಪಡೆಯ ನಾಯಕರು ೨೨೪ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನ ಅಖಾಡಕ್ಕಿಳಿಸೋದಕ್ಕೆ ಸಿದ್ದವಾಗಿದ್ದಾರೆ.‌ ಕಾಂಗ್ರೆಸ್ ಜೆಡಿಎಸ್ ನ ಒಂದು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಪ್ರಚಾರಕ್ಕೆ ಇಳಿದಿದ್ರು, ಇನ್ನೀ  ಬಿಜೆಪಿ ಪಟ್ಟಿ ಬಿಡುಗಡೆ ಮಾಡಿಲ್ಲಾ.. ಪಟ್ಟಿ ಅಂತಿಮಗೊಳಿಸೋದಕ್ಕೆ ಮಾಜಿ ಸಿಎಂ ಯಡಿಯೂರಪ್ಪ , ಸಿಎಂ ಬೊಮ್ಮಯಿ , ರಾಜ್ಯಾದ್ಯಕ್ಷ ಕಟೀಲ್ ಸೇರಿದಂತೆ ಹಲವು  ನಾಯಕರು ದೆಹಲಿಯಲ್ಲೇ ಬೀಡುಬಿಟ್ಟಿದ್ದು, ನಿನ್ನೆಯಿಂದ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಅಮಿತ್ ಶಾ ಜೊತೆ ಸಭೆ ನಡೆಸಿ ಅಂತಿಮ ಹಂತದಲ್ಲಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ  ಕ್ಷಣಗಣನೆ ಪ್ರಾರಂಭವಾಗಿದ್ದು,ಅನೇಕ ಆಕಾಂಕ್ಷಿಗಳ ಎದೆ ಬಡಿತ ಜೋರಾಗಿದೆ. ಯಾರಿಗೆ ಸಿಹಿ ಯಾರಿಗೆ ಕಹಿ ಅನ್ನೋ ಭಯ ಕೂಡ ಅನೇಕರಿಗೆ ಇದೆ. ಇದಕ್ಕೆ ಕಾರಣ ಗುಜರಾತ್ ಮಾದರಿ ಇಲ್ಲಿ ಅಳವಡಿಕೆ ಮಾಡಲಾಗುತ್ತದೆ ಅನ್ನೋ ಚರ್ಚೆ. ಈ ಮಾದರಿ ಕರ್ನಾಟಕದಲ್ಲಿ ಬಂದರೆ ಈಗಿರುವ ಅನೇಕ ಶಾಸಕರಿಗೆ ಕೋಕ್ ಕೊಡೋದ್ರಲ್ಲಿ ಯಾವುದೇ ಅನುಮಾನವಿಲ್ಲಾ ಎಂದೇ ಹೇಳಲಾಗ್ತಿದೆ.

ಒಂದು ಕಡೆ ಪಟ್ಟಿ ಬಿಡುಗಡೆ ತಡವಾಗ್ತಿರೋ ಭೀತಿ ಎದುರಾಗಿದ್ರೆ ಮತ್ಯೊಂದು ಕಡೆ ಗುಜರಾತ್ ಚುನಾವಣೆಯ ಮಾನದಂಡದ ಭಯ ಕೆಲವರಿಗೆ ಕಾಡ್ತಿದೆ ಅಂತ ಹೇಳಲಾಗ್ತಿದೆ‌ .ಇತ್ತೀಚೆಗಷ್ಟೆ ಬೆಂಗಳೂರು ಹೊರ ಹೊಲಯದಲ್ಲಿ ಬಿಜೆಪಿ ಹಿರಿಯ ನಾಯಕರು ಸರಣಿ ಸಭೆಗಳನ್ನು ಮಾಡುವ ಮೂಲಕ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಿ ಹೈಕಮಾಂಡ್ ಗೆ ರವಾನಿಸಲಾಗಿತ್ತು. ಜೊತೆಗೆ  ದೆಹಲಿಯಲ್ಲಿ ಬಿಜೆಪಿ ಸಂಸದೀಯ ಸಭೆ ನಡೆಸಲಾಗಿದ್ದು ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯುವ ಅಂತಿಮ  ಸಭೆಯ ಬಳಿಕೆ  ಇಂದು ಅಥವಾ ನಾಳೆ ಪಟ್ಟಿ ಬಿಡುಗಡೆ ಆಗಲಿದೆ.
ಇನ್ನು ಬಿಡುಗಡೆಯಾಗುವ ಪಟ್ಟಿಯ ಪೈಕಿ ಒಂದಿಷ್ಟು ಶಾಸಕರಿಗೆ ಕೋಕ್ ಕೊಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಜಿಲ್ಲಾವಾರು ಅಭ್ಯರ್ಥಿಗಳು ಆಕಾಂಕ್ಷಿಗಳ ಪರ ಅಭಿಪ್ರಾಯ ,‌ಮತ ಸಂಗ್ರಹಣೆ ಮಾಡಲಾಗಿದ್ದು, ರಾಜ್ಯ  ಕೋರ್ ಕಮಿಟಿಯಲ್ಲಿ ಚರ್ಚೆ ನಡೆಸಿ ಒಂದು ಪಟ್ಟಿಯನ್ನ ಸಿದ್ದತೆ ಮಾಡಿಕೊಂಡಿದ್ದಾರೆ ರಾಜ್ಯ ನಾಯಕರು.. ಈಗಾಗಲೇ ಕೇಂದ್ರ ನಾಯಕರು ಸಹಾ ಮೂರು ಸಮೀಕ್ಷೆಯನ್ನ ನಡೆಸಿದ್ದು ಅದ್ರಲ್ಲಿ ಅಭ್ಯರ್ಥಿಗಳ ಸಂಪೂರ್ಣ ಮಾಹಿತಿಯನ್ನ ಕಲೆಹಾಕಿ ಅಳೆದು ತೂಗಿ ಟಿಕೆಟ್ ಬಿಡುಗಡೆ ಮಾಡಲಾಗುತ್ತೆ ... ಹಾಗಾದ್ರೆ ಯಾರ್ಯಾರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಅನ್ನೋದನ್ನ ನೋಡೋದಾದ್ರೆ..
 
 
 
ಚನ್ನಗಿರಿ - ಮಾಡಾಳ್ ವಿರೂಪಾಕ್ಷಪ್ಪ
 
ಹಾವೇರಿ - ನೆಹರೂ ಓಲೆಕಾರ್
 
ಮೂಡಿಗೆರೆ - ಎಂ ಪಿ ಕುಮಾರಸ್ವಾಮಿ
 
ಚಿತ್ರದುರ್ಗ -  ತಿಪ್ಪಾರೆಡ್ಡಿ
 
ಯಾದಗಿರಿ - ವೆಂಕಟರೆಡ್ಡಿ ಮುದ್ನಾಳ
 
ಕನಕಗಿರಿ - ಬಸವರಾಜ ದಡೇಸುಗೂರು
 
ಶಿವಮೊಗ್ಗ - ಕೆ ಎಸ್ ಈಶ್ವರಪ್ಪ
 
ಅಥಣಿ - ಮಹೇಶ್ ಕುಮಟಳ್ಳಿ
 
ರಾಣೆಬೆನ್ನೂರು - ಅರುಣ್ ಕುಮಾರ್ ಪೂಜಾರ್
 
ರಾಯಚೂರು - ಡಾ.ಶಿವರಾಜ್ ಪಾಟೀಲ್
 
ಪುತ್ತೂರು - ಸಂಜೀವ್ ಮಠಂದೂರು
 
ಉಡುಪಿ - ರಘುಪತಿ ಭಟ್
 
ಸಾಗರ - ಹಾಲಪ್ಪ
 
ಭಟ್ಕಳ - ಸುನೀಲ್ ನಾಯ್ಕ
 
ಸೊರಬ - ಕುಮಾರ್ ಬಂಗಾರಪ್ಪ
 
ಕಾರವಾರ - ರೂಪಾಲಿ ನಾಯ್ಕ್ 
 
ಆಳಂದ - ಸುಭಾಷ್ ಗುತ್ತೇದಾರ್
 
ಹೊಸದುರ್ಗ - ಗೂಳಿಹಟ್ಟಿ ಶೇಖರ್
 
ಧಾರವಾಡ - ಅಮೃತ ದೇಸಾಯಿ
 
ದಾವಣಗೆರೆ ಉತ್ತರ - ಎಸ್ ಎ ರವೀಂದ್ರನಾಥ್
 
ಕಾಪು - ಲಾಲಾಜಿ ಮೆಂಡನ್
 
ಧಾರವಾಡ ಸೆಂಟ್ರಲ್ - ಜಗದೀಶ್ ಶೆಟ್ಟರ್
 
ವಿರಾಜಪೇಟೆ - ಕೆ ಜಿ ಬೋಪಯ್ಯ
 
ಬಸವನಗುಡಿ - ರವಿ ಸುಬ್ರಹ್ಮಣ್ಯ
 
ಚಿಕ್ಕಪೇಟೆ - ಉದಯ್ ಗರುಡಾಚಾರ್
 
ಸುಳ್ಯ- ಸಚಿವ ಅಂಗಾರ
 
ಯಲಬುರ್ಗಾ- ಹಾಲಪ್ಪ ಆಚಾರ್
 
ಮುಧೋಳ್ - ಗೋವಿಂದ ಕಾರಜೋಳ

ಒಂದು ಕಡೆ ಸ್ವ ಪಕ್ಷೀಯದವರಿಂದಲೇ ವಿರೋಧ ಇರುವುದು ಹಾಗೂ ಆಡಳಿತ ವಿರೋಧಿ ಎಂಬ ಆರೋಪ ಹೊತ್ತವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳು ಹೆಚ್ಚಿವೆ. ಮತ್ತೊಂದೆಡೆ 75 ವರ್ಷ ಮೇಲ್ಪಟ್ಟವರಿಗೂ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹೆಚ್ವಿದೆ. ಇನ್ನು ಅನೇಕ ಬಾರಿ ಗೆದ್ದು ಅಧಿಕಾರ ಅನುಭವಿಸುವವರಿಗೂ ಕೂಡ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹೆಚ್ಚಿದೆ. ಇನ್ನು ತಮ್ಮ ರಾಜಕೀಯ ಜೀವನದಲ್ಲಿ ತಮ್ಮ ಹೆಸರಿಗೆ ಚ್ಯುತಿ ಬರುವಂತ ಕೆಲಸ ಮಾಡಿಕೊಂಡವರಿಗೂ ಕೂಡ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹೆಚ್ಚಾಗಿ ಎನ್ನಲಾಗುತ್ತಿದೆ. 

ಬಿಜೆಪಿ ವಲಯದಲ್ಲಿ  ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಿನ್ನೆಯಿಂದ ಹೈಕಮಾಂಡ್ ನಾಯಕರ‌ ಜೊತೆ ರಾಜ್ಯ ನಾಯಕರು ಸತತವಾಗಿ ಸಭೆಯನ್ನ ಮಾಡ್ತಿದ್ದು,ಇಂದು ಸಂಜೆ ಎಲ್ಲದಕ್ಕೂ ತೆರೆ ಎಳೆಯಲಾಗುತ್ತೆ..  ಸುಮಾರು 15-20 ಕ್ಷೇತ್ರಗಳಲ್ಲಿ ಹಾಲಿ ಶಾಸಕರು ಹಾಗೂ ಸಚಿವರಿಗೆ ಶಾಕ್ ಕೊಡುತ್ತಾ ಹೈಕಮಾಂಡ್ ಅನ್ನೋ ಚರ್ಚೆ ಆರಂಭವಾಗಿದೆ. ಟಿಕೆಟ್ ನಂತರ ಪಕ್ಷದಲ್ಲಾಗುವ ಬಂಡಾಯದ ಬಿಸಿಗೆ ಹಾಗೂ ಅಸಮಧಾನಕ್ಕೆ ಬ್ರೇಕ್ ಹಾಕೋಕೆ ಹೈಕಮಾಂಡ್ ಯಾವ ಪ್ಲಾನ್ ಮಾಡ್ತಾರೆ, ಗುಜರಾತ್ ಮಾನದಂಡ ರಾಜ್ಯದಲ್ಲೂ ಅನ್ವಯವಾಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ತನ್ನ 6ನೇ ನೂತನ ಶೋ ರೂಂ