Publish Date: Sun, 09 Apr 2023 (16:03 IST)
Updated Date: Sun, 09 Apr 2023 (15:08 IST)
ವಿಪಕ್ಷ ನಾಯಕ ಸಿದ್ದರಾಮಯ್ಯ ಅಳೆದು ತೂಗಿ ವರುಣಾ ಕ್ಷೇತ್ರವನ್ನು ಫೈನಲ್ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯರನ್ನು ಸೋಲಿಸಲು ರಾಜ್ಯ BJP ಉಪಾಧ್ಯಕ್ಷ B.Y. ವಿಜಯೇಂದ್ರರನ್ನು ವರುಣಾದಿಂದ ಕಣಕ್ಕಿಳಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ವು.. ಆದ್ರೆ ಇದೀಗ ವರುಣಾ, ಶಿಕಾರಿಪುರದಲ್ಲಿ ಕಾಂಗ್ರೆಸ್, BJP ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆಯಾ ಎಂಬ ಪ್ರಶ್ನೆ ಎದ್ದಿದೆ.. ಮಾಜಿ ಸಿಎಂ H.D. ಕುಮಾರಸ್ವಾಮಿ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಹಾಕಿದ್ದ ಬಾಂಬ್ ನಿಜಾನಾ ಎಂಬ ಅನುಮಾನ ದಟ್ಟವಾಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಗುಸುಗುಸು-ಪಿಸುಪಿಸು ನಡೆಯುತ್ತಿದೆ.. B.Y. ವಿಜಯೇಂದ್ರ ವರುಣಾದಿಂದ ಸ್ಪರ್ಧೆ ಬೇಡ, ಅವರು ಶಿಕಾರಿಪುರದಿಂದ ಸ್ಪರ್ಧೆ ಮಾಡ್ತಾರೆ ಎಂದು ಮಾಜಿ ಸಿಎಂ B.S. ಯಡಿಯೂರಪ್ಪ ಹೇಳಿದ್ದಾರೆ.. ವರುಣಾದಿಂದ ಸಚಿವ ವಿ. ಸೋಮಣ್ಣರನ್ನು ಕಣಕ್ಕಿಳಿಸಲಾಗುತ್ತದೆ ಎಂದು ಹೇಳಲಾಗಿದ್ದರೂ, ಸಿದ್ದರಾಮಯ್ಯ ಮತ್ತು ಸೋಮಣ್ಣ ಉತ್ತಮ ಗೆಳೆಯರಾಗಿರುವುದರಿಂದ ವರುಣಾದಿಂದ ಕಣಕ್ಕಿಳಿಯಲು ಸೋಮಣ್ಣ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ... B.Y ವಿಜಯೇಂದ್ರ ಮೊದಲ ಬಾರಿ ಸ್ಪರ್ಧೆಗೆ ಇಳಿದಿರುವುದರಿಂದ ಅವರ ಗೆಲುವ ಸುಲಭವಾಗಬೇಕು.... ಅಂತೆಯೇ ಸಿದ್ದರಾಮಯ್ಯರಿಗೆ ಯಾವುದೇ ರಾಹು, ಕೇತು ಕಾಟ ಕೊಡಬಾರದೆಂದು ಕಾಂಗ್ರೆಸ್ ಮತ್ತು BJP ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ಯಾ ಎಂಬ ಅನುಮಾನ ಮೂಡಿದೆ.