Select Your Language

Notifications

webdunia
webdunia
webdunia
webdunia

ಏ. 12ರಿಂದ 20ರವರೆಗೆ ಕರ್ನಾಟಕದಲ್ಲಿ ವರುಣಾರ್ಭಟ

A. Varunarbhata in Karnataka from 12 to 20
bangalore , ಶುಕ್ರವಾರ, 7 ಏಪ್ರಿಲ್ 2023 (15:00 IST)
ಅಯ್ಯೋ ಬಿಸಿಲು, ತುಂಬಾ ಸೆಕೆ, ಹೇಗಪ್ಪಾ ಹೊರಗಡೆ ಒಡಾಡೋದು ಅಂತ ರಾಜ್ಯದ ಜನತೆ ಮಂಡೆ ಬಿಸಿ ಮಾಡ್ಕೊಂಡಿದ್ರು. ಈ ಬೆನ್ನಲ್ಲೇ ನಾನಿದೀನಿ ಅಂತ ಕಳೆದ ಎರಡು ದಿನಗಳ ಹಿಂದೆ ಎಂಟ್ರಿಕೊಟ್ಟಿದ್ದ ಮಳೆರಾಯ ರಾಜ್ಯಕ್ಕೆ ತಂಪೆರೆದಿದ್ದ. ಬಿಸಿಲಿನ ಬೇಗೆಗೆ ಬೆಂದಿದ್ದ ಭೂಮಿಗೆ ತಣ್ಣನೆಯ ಸ್ಪರ್ಶ ನೀಡಿದ್ದ. ಬೆವತು ಬೆಂಡಾಗಿದ್ದ ಸಕಲ ಜೀವರಾಶಿಗಳಿಗೆ ಹೊಸ ಉತ್ಸಾಹದ ಸೋನೆ ಸುರಿಸಿದ್ದ. ಈ ಬೆನ್ನಲ್ಲೇ ಮತ್ತೆ ಮಳೆಯಾಗುವ ಮುನ್ಸೂಚನೆಯೊಂದು ದೊರೆತಿದ್ದು, ಸತತ ಎಂಟುದಿನಗಳ ಕಾಲ ವರುಣಾ ಅರ್ಭಟಿಸಲಿದ್ದಾನೆ ಅನ್ನೋ ಸುದ್ದಿ ಹೊರಬಿದ್ದಿದೆ. ಕರ್ನಾಟಕದಲ್ಲಿ ಏಪ್ರಿಲ್ 12 ರಿಂದ 20ರವರೆಗೆ ಸಾಧಾರಣ ಅಥವಾ ಭಾರೀ ಮಳೆಯಾಗುವ ಸಾಧ್ಯತೆ ಇದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರವನ್ನು ಟೀಕಿಸಿದ ಮಾತ್ರಕ್ಕೆ ಮಾಧ್ಯಮ ನಿಯಂತ್ರಿಸಲು ಸಾಧ್ಯವಿಲ್ಲ: ಸುಪ್ರೀಂ