Publish Date: Sun, 09 Apr 2023 (18:13 IST)
Updated Date: Sun, 09 Apr 2023 (18:15 IST)
ಬೆಂಗಳೂರಿನ ನಾಗರಭಾವಿಯಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ತನ್ನ 6ನೇ ನೂತನ ಶೋ ರೂಂ ಲೋಕಾರ್ಪಣೆ ಮಾಡಲಾಯಿತು. ಅವಧೂತ ವಿನಯ್ ಗುರೂಜಿ ನೂತನ ಮಳಿಗೆಯನ್ನ ಉದ್ಘಾಟನೆ ಮಾಡಿದ್ರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಟಿಯರಾದ ರೂಪಿಕಾ ಮತ್ತು ಅದಿತಿ ಪ್ರಭುದೇವ ಭಾಗಿಯಾಗಿದ್ರು. 6ನೇ ಮಳಿಗೆಯನ್ನ ಶುರು ಮಾಡಿದ್ದು ತುಂಬಾ ಸಂತಸ ತಂದಿದೆ. ನಾಗರಬಾವಿಯಲ್ಲಿ ಶೋರೂಮ್ ಮಾಡ್ಬೇಕು ಅಂತ ಬಹಳ ದಿನಗಳಿಂದ ಗ್ರಾಹಕರ ಬೇಡಿಕೆಯಾಗಿತ್ತು. ಬೆಂಗಳೂರಿನ ಎಲ್ಲಾ ಭಾಗಗಳಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ ಆಭರಣಗಳು ಜನರಿಗೆ ರಿಯಾಯಿತಿ ದರದಲ್ಲಿ ದೊರೆಯಬೇಕು. ಗ್ರಾಹಕರೇ ನನ್ನ ದೇವರು. ನಮ್ಮ ಹೊಸ ಶೋರೂಮ್ ನಲ್ಲಿ ಎಕ್ಸ್ ಚೇಂಜ್ ಆಫರ್ ಸೇರಿದಂತೆ ಗ್ರಾಹಕರಿಗೆ ವಿಶೇಷ ರಿಯಾಯಿತಿ ಬೆಲೆಯಲ್ಲಿ ವಸ್ತುಗಳು ಸಿಗಲಿವೆ ಎಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ ಮಾಲೀಕರಾದ ಟಿ ಎ ಶರವಣ ತಿಳಿಸಿದ್ರು.