Select Your Language

Notifications

webdunia
webdunia
webdunia
Thursday, 3 April 2025
webdunia

ಸವದತ್ತಿಯಲ್ಲಿ ಸೌರಭ್ ಚೋಪ್ರಾ ಕಣ್ಣೀರು

Saurabh Chopra in tears at Savadatti
ಸವದತ್ತಿ , ಭಾನುವಾರ, 9 ಏಪ್ರಿಲ್ 2023 (15:27 IST)
ಚುಣಾವಣೆ ಸಮೀಪಿಸುತ್ತಿದ್ದಂತೆ ಕಣ್ಣೀರು ಪಾಲಿಟಿಕ್ಸ್ ಜೋರಾಗಿದೆ. ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿ ಕಣ್ಣೀರಿಟ್ಟಿದ್ದಾರೆ. ಕಾಂಗ್ರೆಸ್​​ ಟಿಕೆಟ್​​​ ಕೈ ತಪ್ಪಿದ್ದಕ್ಕೆ ಕೈ ಟಿಕೆಟ್​ ಆಕಾಂಕ್ಷಿ ಸೌರಭ್​​ ಚೋಪ್ರಾ ಕಾರ್ಯಕರ್ತರ ಮುಂದೆ ಕಣ್ಣೀರು ಹಾಕಿದ್ದಾರೆ. 2013 ಹಾಗೂ 2018 ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ತೀವ್ರ ಪೈಪೋಟಿ ಒಡ್ಡಿದ್ದ ಆನಂದ ಚೋಪ್ರಾ, ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ರು.. ಆನಂದ್ ಚೋಪ್ರಾ ದಿವಂಗತ ಶಾಸಕ ಆನಂದ ಮಾಮನಿಗೆ ತೀವ್ರ ಪೈಪೋಟಿ ನೀಡಿದ್ರು.. ಆನಂದ್​ ಚೋಪ್ರಾ ನಿಧನವಾಗಿದ್ದು, ಇದೀಗ ಅವರ ಮಗ ಸೌರಭ್ ಚೋಪ್ರಾ ಈ ಬಾರಿ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿದ್ರು.. ಆದರೆ ಕೈ ಹೈಕಮಾಂಡ್​ ಸೌರಭ್​​ಗೆ​ ಟಿಕೆಟ್​ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸವದತ್ತಿಯಲ್ಲಿ ನಿನ್ನೆ ಬೆಂಬಲಿಗರ ಸಭೆ ನಡೆಸಿದ ಸೌರಭ್ ಚೋಪ್ರಾ ಹಾಗೂ ಅವರ ತಾಯಿ ಕಾಂತಾದೇವಿ ಕಣ್ಣೀರು ಹಾಕಿದ್ದಾರೆ.. ನನ್ನ ಗಂಡನನ್ನು ಕಳೆದುಕೊಂಡಿದ್ದೆ. ನನ್ನ ಮಗನನ್ನು ನಿಮಗೆ ಬಿಟ್ಟಿದ್ದೇನೆ. ನೀವೇನು ಮಾಡ್ತೀರಿ ನಿಮಗೆ ಬಿಟ್ಟಿದ್ದು ಎಂದು ಕಾಂತಾದೇವಿ ಬೆಂಬಲಿಗರ ಮುಂದೆ ಭಾವುಕರಾಗಿ ಮಾತನಾಡಿದ್ದಾರೆ. ನನಗೆ ಕಾಂಗ್ರೆಸ್ ಪಕ್ಷ ಮೋಸ ಮಾಡಿದೆ, ಈ ಬಾರಿ ನಾನು ಸ್ಪರ್ಧೆ ಮಾಡಿ ಕಾಂಗ್ರೆಸ್​​ಗೆ ನಾನು ಏನು, ನನ್ನ ತಂದೆ ಏನು ಅನ್ನೋದನ್ನ ತೋರಿಸ್ತಿನಿ ಎಂದು ಸೌರಭ್​​​​​​ ಸವಾಲ್​ ಹಾಕಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಫುಟ್ಬಾಲ್ ಆಡಿದ್ರೆ ರೆಡ್ಡಿ ಬಳ್ಳಾರಿಗೆ ಹೋಗಿ ಬೀಳ್ತಾರೆ