Select Your Language

Notifications

webdunia
webdunia
webdunia
webdunia

ರಾಜ್ಯ ವಿವಿಧೆಡೆ ಗಾಂಜಾ, ಚಿನ್ನ ಜಪ್ತಿ

ರಾಜ್ಯ ವಿವಿಧೆಡೆ ಗಾಂಜಾ, ಚಿನ್ನ ಜಪ್ತಿ
davanagere , ಭಾನುವಾರ, 9 ಏಪ್ರಿಲ್ 2023 (14:23 IST)
ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 39 ಲಕ್ಷ ಮೌಲ್ಯದ 66 ಕೆಜಿಯ ಬೆಳ್ಳಿ ಆಭರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ದಾವಣಗೆರೆ ತಾಲೂಕಿನ ಹೆಬ್ಬಾಳು ಟೋಲ್ ಬಳಿ ದಾವಣಗೆರೆ ತಹಶೀಲ್ದಾರ್ ಡಾ. M.B. ಅಶ್ವತ್ ಅವರ ನೇತೃತ್ವದ ತಂಡ ತಪಾಸಣೆ ನಡೆಸುತ್ತಿದ್ದಾಗ BMW ಕಾರಿನಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ಬೆಳ್ಳಿ ಆಭರಣಗಳು ಪತ್ತೆಯಾಗಿವೆ. ಇದನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಕಲಬುರಗಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 8 ಕೆಜಿ ಗಾಂಜಾ ವಶಕ್ಕೆ ಪಡೆದು, ಗಾಂಜಾ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ.. ಸೈಯದ್ ಅಬ್ದುಲ್ ಬಂಧಿತ ಗಾಂಜಾ ಸಾಗಾಟಗಾರ.. ಅಂತೆಯೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.. ಮೊಹಮ್ಮದ್ ಬೇಗ್ ಬಂಧಿತ ವ್ಯಕ್ತಿ. ಈತನಿಂದ 13 ಸಾವಿರ ರೂ. ಗಳ ಒಟ್ಟು 960 ಗ್ರಾಂ ತೂಕದ ಒಣ ಗಾಂಜಾ, ಒಂದು ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಓಮಿನಿ ವಾಹನ ಜಪ್ತಿ ಮಾಡಲಾಗಿದೆ. ಮತ್ತೊಂದೆಡೆ ಗದಗದ ಬಿಂಕದಕಟ್ಟಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 8 ಲಕ್ಷ ರೂ. ಮೌಲ್ಯದ 78 ರೇಷ್ಮೆ ಸೀರೆಗಳನ್ನು ಸೀಜ್ ಮಾಡಲಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ : ಡಿಕೆಶಿ ಗರಂ