Publish Date: Wed, 25 Jan 2023 (14:02 IST)
Updated Date: Wed, 25 Jan 2023 (11:04 IST)
ಬೆಂಗಳೂರು : ರಾಜ್ಯದಲ್ಲಿ ಇನ್ನೂ 40-45 ದಿನಗಳು ಮಾತ್ರ ಬಿಜೆಪಿ ಸರ್ಕಾರ ಇರುತ್ತೆ. ಆಮೇಲೆ ಈ ದುಷ್ಟ ಸರ್ಕಾರವನ್ನ ಜನ ಓಡಿಸ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರ್ತಿದ್ದಂತೆ ಡೆಟಾಲ್, ಗಂಜಲ ಹಾಕಿ ವಿಧಾನ ಸೌಧ ಕ್ಲೀನ್ ಮಾಡಿಸ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗುಡುಗಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪ್ರಜಾಧ್ವನಿ ಯಾತ್ರೆಯಿಂದ ಬಿಜೆಪಿಗೆ ತಲೆ ಕೆಟ್ಟು ಹೋಗಿದೆ. 200 ಯುನಿಟ್ ವಿದ್ಯುತ್, 2 ಸಾವಿರ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ ಮೇಲೆ ತಲೆ ಕೆಡಿಸಿಕೊಂಡಿದ್ದಾರೆ.
ಇದರಿಂದ ಬಿಜೆಪಿಯಲ್ಲಿ ಆಂತರಿಕ ಜಗಳ ಹೆಚ್ಚಗಿದೆ. ಯಡಿಯೂರಪ್ಪ ಬೊಮ್ಮಾಯಿ ಜಗಳ, ಸಿ.ಟಿ ರವಿ – ಕಟೀಲ್ ನಡುವೆ ಜಗಳ ಇದೆ. ಇದನ್ನ ಹೇಳೋಕೆ ಆಗ್ತಿಲ್ಲ ಅಷ್ಟೇ. ಅದಕ್ಕಾಗಿ ನಮ್ಮ ಜೊತೆಗಿದ್ದ ಸಚಿವ ಸುಧಾಕರ್ ಅವರಿಂದ ಪ್ರೆಸ್ಮೀಟ್ ಮಾಡಿಸಿದ್ದಾರೆ ಎಂದು ಕುಟುಕಿದ್ದಾರೆ.