Select Your Language

Notifications

webdunia
webdunia
webdunia
webdunia

ಬಿಜೆಪಿ ಸರ್ಕಾರ ಭ್ರಷ್ಟಾಚಾರದ ರಾಜಧಾನಿ : ಶಿವಕುಮಾರ್

ಬಿಜೆಪಿ ಸರ್ಕಾರ ಭ್ರಷ್ಟಾಚಾರದ ರಾಜಧಾನಿ : ಶಿವಕುಮಾರ್
ಬೆಳಗಾವಿ , ಬುಧವಾರ, 11 ಜನವರಿ 2023 (12:19 IST)
ಬೆಳಗಾವಿ : ಸ್ಯಾಂಟ್ರೋ ರವಿ, ಸೈಕಲ್ ರವಿ ಬಿಜೆಪಿ ಸರ್ಕಾರದ ಮುತ್ತುರತ್ನಗಳಿದ್ದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿ ನಾಯಕರು ವಿರುದ್ಧ ವ್ಯಂಗ್ಯವಾಡಿದರು.
 
ನಗರದಲ್ಲಿ ಮಾತನಾಡಿದ ಅವರು, ಮಹಿಳೆಯರು ಕುಂಕುಮ ಹಚ್ಚಿದಾಗ ಒಂಥರ, ಮೂಗುತಿ ಹಾಕಿದಾಗ ಹೇಗೆ ಕಾಣ್ತಾರೋ?. ಅದೇ ರೀತಿ ಇವರೆಲ್ಲ ಈ ಸರ್ಕಾರದ ಮುತ್ತು ರತ್ನಗಳಿದ್ದಂತೆ ಎನ್ನುವ ಮೂಲಕ ಕ್ರಿಮಿನಲ್ಸ್ ಗಳನ್ನು ಹೆಣ್ಣುಮಕ್ಕಳ ಸೌಂದರ್ಯಕ್ಕೆ ಡಿಕೆಶಿ ಹೋಲಿಸಿದು.

ಸೈಕಲ್ ರವಿ, ಸ್ಯಾಂಟ್ರೋ ರವಿ ಮುತ್ತು ರತ್ನಗಳಿದ್ದಂತೆ, ಈ ಸರ್ಕಾರಕ್ಕೆ ಶೋಭೆ ತರುತ್ತಿದ್ದಾರೆ. ಬಿಜೆಪಿ ನಾಯಕರು ಎಂದೆಂದೂ ನೆನಪು ಇಟ್ಟುಕೊಳ್ಳುವಂಥವರು. ಕರ್ನಾಟಕ ಜನರ ಸಮಸ್ಯೆ, ನೋವು ಅಭಿಪ್ರಾಯ ಹೇಳಲು ಜನರ ಮುಂದೆ ಹೋಗುತ್ತಿದ್ದೇವೆ. ಮಹಾತ್ಮಾ ಗಾಂಧಿ 1924 ಇದೇ ಜಾಗದಲ್ಲಿ ಸ್ವಾತಂತ್ರ್ಯಕ್ಕೆ ಹೋರಾಟಕ್ಕೆ ಮಹಾ ಅಧಿವೇಶನ ನಡೆಸಿದ್ದರು.

ವೀರಸೌಧದಿಂದಲೇ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಲಿದ್ದೇವೆ. ಸರ್ಕಾರದ ಕೊಲೆ, ಕಾಯಿಲೆ ಭ್ರಷ್ಟಾಚಾರ ತೊಳೆಯುತ್ತೇವೆ. ಇದು ಬಿ ರಿಪೋರ್ಟ್ ಸರ್ಕಾರ 40 ಪರ್ಸೆಂಟ್ ಕಮಿಷನ್ ಸರ್ಕಾರವಾಗಿದೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಬೆಕ್ಕಿಗೂ ಸಂತಾನಹರಣ ಚಿಕಿತ್ಸೆ ಮಾಡಲು ಮನವಿ!