Select Your Language

Notifications

webdunia
webdunia
webdunia
webdunia

ಬಿಜೆಪಿ ಹೈಕಮಾಂಡ್ ಟಾರ್ಗೆಟ್ ಸಿದ್ದರಾಮಯ್ಯ ?

webdunia
ಬೆಂಗಳೂರು , ಗುರುವಾರ, 12 ಜನವರಿ 2023 (11:57 IST)
ಬೆಂಗಳೂರು : ರಾಜ್ಯಕ್ಕೆ ಅಮಿತ್ ಶಾ ಬಂದು ಹೋದಮೇಲೆ ಸಿದ್ದರಾಮಯ್ಯ ಮೇಲೆ ಆಗ್ರೆಸಿವ್ ಆಟ್ಯಾಕ್ ಶುರುವಾಗಿದ್ದು, ಬೇರೆ ಬೇರೆ ಆಯಾಮಗಳಲ್ಲಿ ಚರ್ಚೆ ಆಗುತ್ತಿದೆ.

ಪೇ ಸಿಎಂ, 40 ಪರ್ಸೆಂಟ್ ಕಮಿಷನ್ ಚಾರ್ಜ್ ಮಾಡಿ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ಗೆ ತಿರುಗೇಟು ನೀಡಬೇಕೆಂದು ಸಂಘದ ಕಟ್ಟಾಜ್ಞೆ ಎನ್ನಲಾಗಿದೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಸಂಚಲನ ಉಂಟಾಗಿದ್ದು, ಕಾಂಗ್ರೆಸ್ ಪ್ಲ್ಯಾನ್ ಬೀಟ್ಗೆ ಬಿಜೆಪಿ ಗೇಮ್ ಪ್ಲ್ಯಾನ್ ಮಾಡಿದೆ.

ಸಿದ್ದರಾಮಯ್ಯ ಒಬ್ಬ ನಾಯಕನನ್ನು ನೀವು ನೋಡಿಕೊಳ್ಳಿ, ಉಳಿದಿದ್ದು ನಮಗೆ ಬಿಡಿ. ಹೀಗೆ ಕರ್ನಾಟಕಕ್ಕೆ ಅಮಿತ್ ಶಾ ಬಂದಾಗ ರಾಜ್ಯ ನಾಯಕರಿಗೆ ಸೂಕ್ಷ್ಮವಾಗಿ ಹೇಳಿದ್ದರು ಎನ್ನಲಾಗಿದೆ.

ಬಿಜೆಪಿಯ ಪ್ರತಿ ಏಟಿಗೂ ಎದುರೇಟು ನೀಡುವ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಕಟ್ಟಿ ಹಾಕಿದರೆ ಎದುರಾಳಿ ಆಟ ಅರ್ಧ ಕಟ್ಟಿ ಹಾಕಿದಂತೆ ಎಂಬ ಗೇಮ್ ಪ್ಲ್ಯಾನ್ ಬಿಜೆಪಿ ಹೈಕಮಾಂಡ್ನದ್ದು. ಆ ಕಾರಣಕ್ಕಾಗಿಯೇ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ತಂಡ ಮುಗಿಬಿದ್ದಿದೆ ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಕೆಮ್ಮಿನ ಸಿರಪ್ ಬಳಸಬೇಡಿ : WHO