ಸ್ಯಾಂಟ್ರೋ ರವಿ, ಸೈಕಲ್ ರವಿ BJP ಸರ್ಕಾರದ ಮುತ್ತುರತ್ನಗಳಿದ್ದಂತೆ ಎಂದು KPCC ಅಧ್ಯಕ್ಷ ಡಿ.ಕೆ ಶಿವಕುಮಾರ್ BJP ನಾಯಕರ ವಿರುದ್ಧ ವ್ಯಂಗ್ಯವಾಡಿದರು. ಬೆಳಗಾವಿ ನಗರದಲ್ಲಿ ಮಾತನಾಡಿದ ಅವರು, ಮಹಿಳೆಯರು ಕುಂಕುಮ ಹಚ್ಚಿದಾಗ ಒಂಥರ, ಮೂಗುತಿ ಹಾಕಿದಾಗ ಹೇಗೆ ಕಾಣ್ತಾರೋ? ಅದೇ ರೀತಿ ಇವರೆಲ್ಲ ಈ ಸರ್ಕಾರದ ಮುತ್ತು ರತ್ನಗಳಿದ್ದಂತೆ ಎಂದಿದ್ದಾರೆ. ಈ ಮೂಲಕ ಕ್ರಿಮಿನಲ್ಸ್ಗಳನ್ನು ಹೆಣ್ಣುಮಕ್ಕಳ ಸೌಂದರ್ಯಕ್ಕೆ ಡಿಕೆಶಿ ಹೋಲಿಸಿದ್ದಾರೆ. ಸೈಕಲ್ ರವಿ, ಸ್ಯಾಂಟ್ರೋ ರವಿ ಈ ಸರ್ಕಾರಕ್ಕೆ ಶೋಭೆ ತರುತ್ತಿದ್ದಾರೆ. BJP ನಾಯಕರು ಎಂದೆಂದೂ ನೆನಪು ಇಟ್ಟುಕೊಳ್ಳುವಂಥವರು. ಕರ್ನಾಟಕ ಜನರ ಸಮಸ್ಯೆ, ನೋವು ಅಭಿಪ್ರಾಯ ಹೇಳಲು ಜನರ ಮುಂದೆ ಹೋಗುತ್ತಿದ್ದೇವೆ ಎಂದು ತಿಳಿಸಿದರು.