Select Your Language

Notifications

webdunia
webdunia
webdunia
webdunia

ನಂದಿನಿ ವಿಷಯದಲ್ಲಿ ರೋಗಿಷ್ಠ ಮನಸ್ಥಿತಿ ಹೊಂದಿದ ಕಾಂಗ್ರೆಸ್ ಪಕ್ಷ: ಎನ್.ರವಿಕುಮಾರ್

ನಂದಿನಿ ವಿಷಯದಲ್ಲಿ ರೋಗಿಷ್ಠ ಮನಸ್ಥಿತಿ ಹೊಂದಿದ ಕಾಂಗ್ರೆಸ್ ಪಕ್ಷ: ಎನ್.ರವಿಕುಮಾರ್
bangalore , ಭಾನುವಾರ, 9 ಏಪ್ರಿಲ್ 2023 (18:00 IST)
ದೇಶದಲ್ಲಿ ಅಮೂಲ್‍ಗೆ ಸ್ಪರ್ಧೆ ಒಡ್ಡುವ ಮಾದರಿಯಲ್ಲಿ ಕೆಎಂಎಫ್ ಸಂಸ್ಥೆಯನ್ನು ಬೆಳೆಸುತ್ತೇವೆ. ನಂದಿನಿ ವಿಚಾರದಲ್ಲಿ ಕಾಂಗ್ರೆಸ್ ಆರೋಪ ಆಧಾರರಹಿತ ಮತ್ತು ಅವರದು ರೋಗಿಷ್ಠ ಮನಸ್ಥಿತಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಟೀಕಿಸಿದರು.ಮಲ್ಲೇಶ್ವರಂನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಕೆ.ಶಿವಕುಮಾರ್, ಸಿದ್ದರಾಮಯ್ಯ ನಂದಿನಿ ಮುಳುಗಿಸುವ ಟೀಕೆಗೆ ಉತ್ತರಿಸಿದ ಅವರು, ನಂದಿನಿ ಮಾತ್ರವಲ್ಲದೆ ರಾಜ್ಯದ ಹಸುಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮದು. ಅದಕ್ಕೇ ಗೋಹತ್ಯಾ ನಿಷೇಧ ಮಾಡಿದ್ದೇವೆ. ಕಾಂಗ್ರೆಸ್, ಜೆಡಿಎಸ್ ಪಕ್ಷದ ನಾಯಕರದು ದ್ವಿಮುಖ ನೀತಿ. ಗೋಹತ್ಯೆ ಆಗುತ್ತಿರಬೇಕು. ಆದರೆ, ನಂದಿನಿ ಉಳಿಯಬೇಕೆಂದರೆ ಅದು ಹೇಗೆ ಸಾಧ್ಯ ಎಂದು ಕೇಳಿದರು....ಗೋಹತ್ಯೆ ನಿಷೇಧ ಕಾಯ್ದೆ ವಿರುದ್ಧ ಮತ ಹಾಕಿದವರು ನೀವು ಎಂದು ಟೀಕಿಸಿದರು. ನಂದಿನಿಯನ್ನು ದೇಶದ ದೊಡ್ಡ ಹೈನುಗಾರಿಕಾ ಸಂಸ್ಥೆಯಾಗಿ ಮಾಡುತ್ತೇವೆ ಎಂದು ಸವಾಲೆಸೆದರು....ಪ್ರಧಾನಿಯವರ ಭೇಟಿ ಕೆಲವೇ ಕೆಲವು ನಾಯಕರಿಗೆ ದುಃಖ ತಂದಿದೆ. ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಅವರು ಪ್ರಧಾನಿ ಭೇಟಿಯನ್ನು ಖಂಡಿಸಿದ್ದಾರೆ. ಇವರು ಸಣ್ಣ ಮನಸ್ಸು ಹೊಂದಿದ್ದಾರೆ. ಪ್ರವಾಹ, ಕೋವಿಡ್ ವೇಳೆ ಭೇಟಿ ಕೊಟ್ಟಿಲ್ಲ ಎಂದು ಕೇಳಿದ್ದಾರೆ. ಈ ಸಣ್ಣ ಮನಸ್ಸಿನ ವ್ಯಕ್ತಿಗಳು ದೊಡ್ಡ ನಾಯಕರು ಆಗಲು ಅಸಾಧ್ಯ ಎಂದು ಟೀಕಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ರೈತರಿಗೆ ಹೋಟೆಲ್ ಮಾಲೀಕರ ಬೆಂಬಲ: ನಂದಿನಿ ಹಾಲು, ಉತ್ಪನ್ನಗಳನ್ನೇ ಬಳಸಲು ನಿರ್ಧಾರ