ಮುಂಬೈ: ಆರ್ ಆರ್ ಆರ್ ಸ್ಟಾರ್ ಜ್ಯೂ.ಎನ್ ಟಿಆರ್ ಇದೀಗ ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಆರ್ ಆರ್ ಆರ್ ಸಿನಿಮಾಗೆ ಜ್ಯೂ.ಎನ್ ಟಿಆರ್ 45 ಕೋಟಿ ಸಂಭಾವನೆ ಪಡೆದಿದ್ದರು. ಇದೀಗ ವಾರ್ 2 ಸಿನಿಮಾಗೆ ಅವರ ಸಂಭಾವನೆ ಡಬಲ್ ಆಗಿದೆ.
ವಾರ್ 2 ಸಿನಿಮಾದಲ್ಲಿ ಹೃತಿಕ್ ರೋಷನ್ ಜೊತೆ ತೆರೆ ಹಂಚಿಕೊಳ್ಳಲಿರುವ ಜ್ಯೂ.ಎನ್ ಟಿಆರ್ ಬರೋಬ್ಬರಿ 100 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿಯಿದೆ. ಬಾಲಿವುಡ್ ನಟರನ್ನು ಮೀರಿಸುವ ಸಂಭಾವನೆಯಿದು. ಬಾಲಿವುಡ್ ನಲ್ಲೇ ಕೆಲವು ಸ್ಟಾರ್ ಗಳು ಮಾತ್ರ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಜ್ಯೂ.ಎನ್ ಟಿಆರ್ ಅವರ ಸಮಕ್ಕೆ ಸಂಭಾವನೆ ಪಡೆಯುತ್ತಿರುವುದು ಎಲ್ಲರೂ ಬೆರಗಾಗುವಂತೆ ಮಾಡಿದೆ.