Select Your Language

Notifications

webdunia
webdunia
webdunia
webdunia

ಬಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾರಾ ಜ್ಯೂ.ಎನ್ ಟಿಆರ್

ಬಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾರಾ ಜ್ಯೂ.ಎನ್ ಟಿಆರ್
ಹೈದರಾಬಾದ್ , ಭಾನುವಾರ, 26 ಮಾರ್ಚ್ 2023 (09:20 IST)
Photo Courtesy: Twitter
ಹೈದರಾಬಾದ್: ಆರ್ ಆರ್ ಆರ್ ಸಿನಿಮಾ ನಂತರ ಜ್ಯೂ.ಎನ್ ಟಿಆರ್ ಖ್ಯಾತಿ ಹೆಚ್ಚಾಗಿದೆ. ಬಾಲಿವುಡ್ ನವರೂ ತೆಲುಗು ಸ್ಟಾರ್ ಮೇಲೆ ಕಣ್ಣಿಟ್ಟಿದ್ದಾರೆ.

ಸದ್ಯಕ್ಕೆ ಪ್ರಶಾಂತ್ ನೀಲ್ ನಿರ್ದೇಶನದ  ಸಿನಿಮಾದಲ್ಲಿ ಅಭಿನಯಿಸುತ್ತಿರುವ ಜ್ಯೂ.ಎನ್ ಟಿಆರ್ ಸದ್ಯದಲ್ಲೇ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಬಾಲಿವುಡ್ ನಿರ್ಮಾಪಕ ಭೂಷಣ್ ಕುಮಾರ್ ನಿರ್ಮಾಣದಲ್ಲಿ ಜ್ಯೂ.ಎನ್ ಟಿಆರ್ ಬಾಲಿವುಡ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಅದಕ್ಕೆ ತಕ್ಕಂತೇ ಮೊನ್ನೆಯಷ್ಟೇ ನಡೆದ ಜ್ಯೂ.ಎನ್ ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಭೂಷಣ್ ಕಾಣಿಸಿಕೊಂಡಿದ್ದರು. ಹೀಗಾಗಿ ತಾರಕ್ ಬಾಲಿವುಡ್ ಸಿನಿಮಾ ಮಾಡಬಹುದು ಎಂಬ ವದಂತಿ ದಟ್ಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲವ್ ಮಾಕ್ಟೇಲ್ ಸಾಕು ಗುರೂ! ಡಾರ್ಲಿಂಗ್ ಕೃಷ್ಣಗೆ ನೆಟ್ಟಿಗರ ಟಾಂಗ್