Select Your Language

Notifications

webdunia
webdunia
webdunia
webdunia

ಮಹೇಶ್ ಬಾಬು-ರಾಜಮೌಳಿ ಸಿನಿಮಾ ಚಾಲನೆ ಆಗೋದು ಮುಂದಿನ ವರ್ಷಕ್ಕೇ!

ಮಹೇಶ್ ಬಾಬು-ರಾಜಮೌಳಿ ಸಿನಿಮಾ ಚಾಲನೆ ಆಗೋದು ಮುಂದಿನ ವರ್ಷಕ್ಕೇ!
ಹೈದರಾಬಾದ್ , ಶನಿವಾರ, 25 ಮಾರ್ಚ್ 2023 (09:10 IST)
Photo Courtesy: Twitter
ಹೈದರಾಬಾದ್: ಆಸ್ಕರ್ ವಿಜೇತ ಆರ್ ಆರ್ ಆರ್ ಸಿನಿಮಾ ನಿರ್ದೇಶಕ ರಾಜಮೌಳಿ ಮುಂದಿನ ಸಿನಿಮಾ ಪ್ರಿನ್ಸ್ ಮಹೇಶ್ ಬಾಬು ಜೊತೆಗೆ ಎಂಬುದು ಎಲ್ಲರಿಗೂ ಗೊತ್ತೇ ಇದೆ.

ಈ ಸಿನಿಮಾಗಾಗಿ ರಾಜಮೌಳಿ ಈಗಾಗಲೇ ಅಮೆರಿಕಾದಲ್ಲಿ ವಿಎಫ್ ಎಕ್ಸ್ ತಜ್ಞರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಸದ್ಯಕ್ಕಂತೂ ಈ ಸಿನಿಮಾ ಶುರುವಾಗಲ್ಲ. ಸಿನಿಮಾ ಶೂಟಿಂಗ್ ಶುರುವಾಗುವುದು ಮುಂದಿನ ವರ್ಷವೇ.

ಅದಕ್ಕೆ ಮೊದಲು ರಾಜಮೌಳಿ ವರ್ಕ್ ಶಾಪ್ ನಡೆಸಲಿದ್ದಾರೆ. ಇದು ಸುಮಾರು ಆರು ತಿಂಗಳವರೆಗೆ ನಡೆಯಲಿದ್ದು, ಈ ವರ್ಷದ ಅಂತ್ಯದವರೆಗೂ ನಡೆಯಲಿದೆ. ಹೀಗಾಗಿ ಶೂಟಿಂಗ್ ಆರಂಭವಾಗುವುದು ಮುಂದಿನ ವರ್ಷವೇ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀಕೆಂಡ್ ವಿತ್ ರಮೇಶ್ ನಲ್ಲಿ ಹೊರಬೀಳಲಿದೆ ರಮ್ಯಾ ಬದುಕಿನ ಗುಟ್ಟುಗಳು!