Select Your Language

Notifications

webdunia
webdunia
webdunia
webdunia

ಬಾಲಿವುಡ್ ನಲ್ಲಿ ಕ್ಲಿಕ್ ಆಗದೇ ಮತ್ತೆ ಟಾಲಿವುಡ್ ಗೆ ಮರಳಿದ ರಶ್ಮಿಕಾ

ರಶ್ಮಿಕಾ ಮಂದಣ್ಣ
ಹೈದರಾಬಾದ್ , ಶುಕ್ರವಾರ, 24 ಮಾರ್ಚ್ 2023 (08:20 IST)
Photo Courtesy: Twitter
ಹೈದರಾಬಾದ್: ಸ್ಯಾಂಡಲ್ ವುಡ್ ನಿಂದ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿ ಟಾಲಿವುಡ್ ನಲ್ಲಿ ಕ್ಲಿಕ್ ಆಗಿ ಬಳಿಕ ಬಾಲಿವುಡ್ ಗೆ ಹಾರಿದ್ದ ರಶ್ಮಿಕಾಗೆ ಯಾಕೋ ಹಿಂದಿ ಸಿನಿಮಾದಲ್ಲಿ ಅದೃಷ್ಟ ಖುಲಾಯಿಸಲಿಲ್ಲ.

ಇದುವರೆಗೆ ಮಾಡಿದ ಎರಡೂ ಹಿಂದಿ ಸಿನಿಮಾಗಳೂ ಹೇಳಿಕೊಳ್ಳುವಷ್ಟು ಯಶಸ್ಸು ತಂದುಕೊಡಲಿಲ್ಲ. ಅದರಲ್ಲೂ ಅಮಿತಾಭ್ ಬಚ್ಚನ್ ಜೊತೆ ನಟಿಸಿದ್ದ ಮೊದಲ ಸಿನಿಮಾವೇ ಸೋತು ಸುಣ್ಣವಾಗಿತ್ತು. ಹೀಗಾಗಿ ಬಾಲಿವುಡ್ ನಲ್ಲಿ ರಶ್ಮಿಕಾ ಭವಿಷ್ಯ ಮಂಕಾಗಿದೆ.

ಹೀಗಾಗಿ ರಶ್ಮಿಕಾ ಈಗ ಮತ್ತೆ ಟಾಲಿವುಡ್ ಕಡೆಗೆ ಮುಖ ಮಾಡಿದ್ದಾರೆ. ನಿತಿನ್ ಜೊತೆ ಮತ್ತೊಂದು ಸಿನಿಮಾಗೆ ರಶ್ಮಿಕಾ ಸಹಿ ಹಾಕಿದ್ದಾರೆ. ಟಾಲಿವುಡ್ ನಲ್ಲಿ ರಶ್ಮಿಕಾ ಅಭಿನಯಿಸಿದ್ದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಆಗಿದ್ದವು. ಹೀಗಾಗಿ ಈಗ ಮತ್ತೆ ತಮ್ಮ ಸಕ್ಸಸ್ ಫಾರ್ಮುಲಾ ಹುಡುಕಿ ಹೊರಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಚಾಲನೆ