ಬೆಂಗಳೂರು: ಯುಗಾದಿಯ ಶುಭ ದಿನದಂದೇ ಕಾಂತಾರ ಸಿನಿಮಾ ತಂಡ ಎರಡನೇ ಭಾಗದ ಬಗ್ಗೆ ಗುಡ್ ನ್ಯೂಸ್ ಕೊಟ್ಟಿದೆ.
ಕಾಂತಾರ 1 ಭಾರೀ ಸಕ್ಸಸ್ ಆಗಿತ್ತು. ಇದೀಗ ಸ್ಪ್ಯಾನಿಶ್ ಮತ್ತು ಇಟಾಲಿಯನ್ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ. ಇದರ ಬೆನ್ನಲ್ಲೇ ನಿರ್ದೇಶಕ, ನಟ ರಿಷಬ್ ಶೆಟ್ಟಿ ಕಾಂತಾರ 2 ಬಗ್ಗೆ ಅಪ್ ಡೇಟ್ ಕೊಟ್ಟಿದ್ದಾರೆ.
ಯುಗಾದಿ ಹಬ್ಬಕ್ಕೆ ಶುಭಾಶಯ ಕೋರುವ ಜೊತೆಗೆ ಕಾಂತಾರ 2 ಬರವಣಿಗೆ ಪ್ರಾರಂಭವಾಗಿದೆ ಎಂದಿದ್ದಾರೆ. ಇಷ್ಟು ದಿನ ರಿಷಬ್ ಶೆಟ್ಟಿ ಕಾಡು ಮೇಡು ಸುತ್ತಿ, ಹಲವು ತಜ್ಞರನ್ನು ಭೇಟಿ ಮಾಡಿ ತಮ್ಮ ಕತೆಗೆ ಸರಕು ರೆಡಿ ಮಾಡುತ್ತಿದ್ದಾರೆ. ಇದೀಗ ಯುಗಾದಿಯ ಶುಭ ಮುಹೂರ್ತದಲ್ಲೇ ಕತೆ ಬರೆಯಲು ಪ್ರಾರಂಭಿಸಿರುವುದಾಗಿ ಹೇಳಿದ್ದಾರೆ.