Publish Date: Fri, 17 Mar 2023 (17:11 IST)
Updated Date: Fri, 17 Mar 2023 (17:30 IST)
ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ, ಪರ್ಮನೆಂಟ್ ಮಿಷನ್ ಆಫ್ ಟು ದಿ ಯು ಎನ್ ಹಾಗೂ ಜಿನಿವಾದ ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಕಾಂತಾರ ಚಿತ್ರದ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಹಾಗೂ ರಿಷಭ್ ಶೆಟ್ಟಿ ನಟಿಸಿ, ನಿರ್ದಶಿಸಿರುವ ಈ ಚಿತ್ರ ಈಗಾಗಲೇ ವಿಶ್ವದಾದ್ಯಂತ ಜನಮನ್ನಣೆ ಪಡೆದಿದೆ. ಸ್ವಿಟ್ಜರ್ಲೆಂಡ್ನ ಜಿನಿವಾ ನಗರದಲ್ಲಿ ಕಳೆದ ಕೆಲವು ದಿನಗಳಿಂದ ವಿಶ್ವಸಂಸ್ಥೆಯ ವಾರ್ಷಿಕ ಸಭೆ ನಡೆಯುತ್ತಿದೆ. ಇದರಲ್ಲಿ ಪಾಲ್ಗೊಂಡಿರುವ ರಿಷಭ್ ಶೆಟ್ಟಿ ಈಗಾಗಲೇ ಕೆಲವು ಉಪಯುಕ್ತ ವಿಷಯಗಳ ಬಗ್ಗೆ ಅಲ್ಲಿ ಮಾತನಾಡಿದ್ದಾರೆ. ಇಂದು ಸಂಜೆ ಜಿನಿವಾದ ಕಾಲಮಾನದ ಪ್ರಕಾರ ಸಂಜೆ 6.30ಕ್ಕೆ ಹಾಲ್ ಸಂಖ್ಯೆ 13ರ ಪಾಥೆ ಬಾಲೆಕ್ಸರ್ಟ್ನಲ್ಲಿ ಕಾಂತಾರ ಚಿತ್ರ ಪ್ರದರ್ಶನವಾಗಲಿದೆ.