Select Your Language

Notifications

webdunia
webdunia
webdunia
webdunia

ರಾಮ್ ಚರಣ್ ಬರ್ತ್ ಡೇಗೆ ಜ್ಯೂ.ಎನ್ ಟಿಆರ್ ಗೈರಾಗಿದ್ದಕ್ಕೆ ಕಾರಣ ಬಯಲು

ರಾಮ್ ಚರಣ್ ಬರ್ತ್ ಡೇಗೆ ಜ್ಯೂ.ಎನ್ ಟಿಆರ್ ಗೈರಾಗಿದ್ದಕ್ಕೆ ಕಾರಣ ಬಯಲು
ಹೈದರಾಬಾದ್ , ಗುರುವಾರ, 30 ಮಾರ್ಚ್ 2023 (09:50 IST)
ಹೈದರಾಬಾದ್: ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ ತೇಜ ಬರ್ತ್ ಡೇ ಪಾರ್ಟಿಗೆ ಸಹ ನಟರಾಗಿದ್ದ ಜ್ಯೂ.ಎನ್ ಟಿಆರ್ ಗೈರಾಗಿದ್ದು ಹಲವರ ಹುಬ್ಬೇರುವಂತೆ ಮಾಡಿತ್ತು.

ರಾಮ್ ಚರಣ್ ಬರ್ತ್ ಡೇ ಪಾರ್ಟಿಯಲ್ಲಿ ಜ್ಯೂ.ಎನ್ ಟಿಆರ್ ಹೊರತಾಗಿ ಆರ್ ಆರ್ ಆರ್ ಸಿನಿಮಾ ತಂಡದ ಎಲ್ಲರೂ ಭಾಗಿಯಾಗಿದ್ದರು. ಆದರೆ ಆರ್ ಆರ್ ಆರ್ ಸಿನಿಮಾ ಬಳಿಕ ಇಬ್ಬರೂ ಸ್ಟಾರ್ ಗಳೂ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ತಾರಕ್ ಗೈರಾಗಿದ್ದು ಹಲವರಿಗೆ ಅನುಮಾನ ಮೂಡಿಸಿತ್ತು.

ಮೂಲಗಳ ಪ್ರಕಾರ ತಾರಕ್ ಪಾರ್ಟಿಯಲ್ಲಿ ಕಾಣಿಸಿಕೊಳ್ಳದಿರಲು ಬೇರೆಯದೇ ಕಾರಣವಿದೆ. ಇದಕ್ಕೂ ಒಂದು ದಿನ ಮೊದಲಷ್ಟೇ ತಾರಕ್ ತಮ್ಮ ಪತ್ನಿ ಪ್ರಣತಿ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದರು. ಅದಲ್ಲದೆ ಸದ್ಯಕ್ಕೆ ಜ್ಯೂ.ಎನ್ ಟಿಆರ್ ಮುಂದಿನ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿಯೇ ಪಾರ್ಟಿಗೆ ಆಹ್ವಾನವಿದ್ದರೂ ಭಾಗಿಯಾಗಲಿಲ್ಲ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಶ್ವರ್ಯಾಗೆ ವಯಸ್ಸೇ ಆಗೋಲ್ವಾ? ಪೊನ್ನಿಯನ್ ಸೆಲ್ವನ್2 ಟ್ರೈಲರ್ ನಲ್ಲಿ ಮಿಂಚಿದ ಸುಂದರಿ