Select Your Language

Notifications

webdunia
webdunia
webdunia
webdunia

ಅರಸೀಕೆರೆ ಶಾಸಕ ಶಿವಲಿಂಗೇಗೌಡ ವಿರುದ್ಧ ದೂರು ದಾಖಲಿಸಿದ ಎನ್ ರಮೇಶ್

ಅರಸೀಕೆರೆ ಶಾಸಕ ಶಿವಲಿಂಗೇಗೌಡ ವಿರುದ್ಧ ದೂರು ದಾಖಲಿಸಿದ ಎನ್ ರಮೇಶ್
bangalore , ಮಂಗಳವಾರ, 28 ಮಾರ್ಚ್ 2023 (20:25 IST)
ಅರಸೀಕೆರೆ ಶಾಸಕ ಶಿವಲಿಂಗೇಗೌಡ ವಿರುದ್ಧ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ಎರಡು ದೂರುಗಳನ್ನ ನೀಡಿದ್ದಾರೆ‌. ಸರ್ಕಾರದ ಎರಡು ಮಹತ್ವದ ಯೋಜನೆಗಳ ಹೆಸರಿನಲ್ಲಿ ಸುಮಾರು 250 ಕೋಟಿಯಷ್ಟು ಅಕ್ರಮವೆಸಗಿರುವ ಆರೋಪದಡಿ ಕೆಲ ದಾಖಲೆಗಳ ಸಹಿತ ಶಿವಲಿಂಗೇಗೌಡ ವಿರುದ್ಧ ಎನ್.ಆರ್.ರಮೇಶ್ ದೂರು ಸಲ್ಲಿಸಿದ್ದಾರೆ.ಎತ್ತಿನ ಹೊಳೆ ಹಾಗೂ ನರೇಗಾ ಯೋಜನೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದಡಿ ಶಾಸಕರು, ಅಧಿಕಾರಿಗಳ ಸಹಿತ ಒಟ್ಟು 15 ಜನರ ವಿರುದ್ಧ ದೂರು ದಾಖಲಾಗಿದೆ.
 
ಎತ್ತಿನ ಹೊಳೆ ಯೋಜನೆಯು ಚೆಕ್ ಡ್ಯಾಂಗಳನ್ನು ನಿರ್ಮಿಸುವುದು, ಆಯಾ ಪ್ರದೇಶಗಳಲ್ಲಿರುವ ಕೆರೆ/ಹೊಳೆಗಳ ಹೂಳೆತ್ತುವುದು ಹಾಗೂ ಅವುಗಳ ಸುತ್ತಮುತ್ತಲ ಪ್ರದೇಶಗಳಿಗೆ ಕೊಳವೆ ಮಾರ್ಗಗಳನ್ನು ಮತ್ತು ರಸ್ತೆಗಳನ್ನು ನಿರ್ಮಿಸುವುದಾಗಿತ್ತು. ಆದರೆ ಶಾಸಕ ಶಿವಲಿಂಗೇಗೌಡರವರು ಭ್ರಷ್ಟ ಅಧಿಕಾರಿಗಳೊಂದಿಗೆ ಶಾಮೀಲಾಗಿ ಬೃಹತ್ ಪ್ರಮಾಣದ ಅಕ್ರಮಗಳನ್ನು ಎಸಗಿದ್ದಾರೆ.150ಕೋಟಿ ರೂಗಳಿಗೂ ಹೆಚ್ಚು ಹಣ ದುರ್ಬಳಕೆ ಮಾಡಲಾಗಿದೆ.ಕಳೆದ ಮೂರು ವರ್ಷದಲ್ಲಿ ಎತ್ತಿನ‌ಹೊಳೆ ಯೋಜನೆಯಲ್ಲಿ ಎಸ್.ಸಿ, ಎಸ್.ಟಿ ಸಮುದಾಯದ ಜನರಿಗೆ ಈ ಯೋಜನೆ ಅನ್ವಯವಾಗಿತ್ತು. ಜನರಲ್ ಕೆಟಕೆಗೇರಿಯಲ್ಲಿ ಟೆಂಡರ್ ಕರೆಯದೆ ತಮಗೆ ಬೇಕಾದವರಿಗೆ ಟೆಂಡರ್ ಕೊಟ್ಟು, 75% ಕಾಮಗಾರಿ ಮಾಡದೇ ಹಣವನ್ನು ನುಂಗಿದ್ದಾರೆ  ಎಂದು ಆರೋಪಿಸಲಾಗಿದೆ. ಅಲ್ದೆ 
ಕಳೆದ ಐದು ವರ್ಷಗಳಲ್ಲಿ (ನರೇಗಾ) ಯೋಜನೆಯ ಅನುಷ್ಠಾನಕ್ಕೆಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಮೂಲಕ ಬಿಡುಗಡೆಯಾಗಿರುವ 150 ಕೋಟಿ ರೂ. ಗಳಿಗೂ ಹೆಚ್ಚು ಮೊತ್ತದ ಅನುದಾನಗಳ ಪೈಕಿ, ಶೇ. 50% ಕ್ಕೂ ಹೆಚ್ಚು ಹಣವನ್ನು ಶಾಸಕ ಶಿವಲಿಂಗೇಗೌಡರು ತಮ್ಮ ಆಪ್ತ ಮತ್ತು ವಂಚಕ ಅಧಿಕಾರಿಗಳ ಸಹಕಾರದಿಂದ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಎನ್.ಆರ್.ರಮೇಶ್, ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಎಷ್ಟು ಹಣ ಕೊಟ್ಟಿದಾರೆ ಎಂದು ಉಲ್ಲೇಖಿಸಿರುವ AEE ರಘುನಾಥ್ ಎಂಬುವವರ ಡೈರಿಯ ಸಾಕ್ಷ್ಯಾಧಾರಗಳನ್ನ ಲೋಕಾಯುಕ್ತಕ್ಕೆ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೈ ಪಾಳ್ಯದ ಬಂಜಾರ ಸಮುದಾಯದ ನಾಯಕರಿಂದ ಸರ್ಕಾರದ ವಿರುದ್ದ ಕಿಡಿ