Publish Date: Tue, 28 Mar 2023 (19:50 IST)
Updated Date: Tue, 28 Mar 2023 (19:39 IST)
ಹಾವೇರಿ ಕ್ಷೇತ್ರದ ಶಾಸಕ ನೇಹರು ಒಲೆಕಾರ ಅವರನ್ನು ಶಾಸಕ ಸ್ಥಾನದಿಂದ ವಜಾ ಗೊಳಿಸುವಂತೆ ಬಿಜೆಪಿ ಕಾರ್ಯಕರ್ತ ಸಂತೋಷ ರೆಡ್ಡಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಂತೋಷ ರೆಡ್ಡಿ ಈಗಾಗಲೇ ಹಾವೇರಿ ಕ್ಷೇತ್ರದ ಶಾಸಕರಾದ ನೇಹರು ಒಲೆಕಾರ ಅವರ ಮೇಲೆ ಕೋಟ್೯ ಎರಡು ವರ್ಷ ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆ ನೇಹರು ಒಲೆಕಾರ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು.ಈಗಾ ರಾಹುಲ್ ಗಾಂಧಿ ಅವರನ್ನ ಸಂಸದ ಸ್ಥಾನದಿಂದ ವಜಾ ಗೊಳಿಸಿದ್ದಾರೆ.ಅದೇ ರೀತಿ ಕಾಂಗ್ರೆಸ್ ಗೂ ಒಂದೇ ಕಾನೂನು, ಬಿಜೆಪಿಗೂ ಒಂದೇ ಕಾನೂನು, ಹೀಗಾಗಿ ಈಗಾಗಲೇ ನಾನು ಬಿಜೆಪಿ ರಾಜ್ಯಾಧ್ಯಾಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ದೂರು ಸಲ್ಲಿಸಿದ್ದು.ರಾಜ್ಯ ಪಾಲರಿಗೂ ದೂರು ಕೊಟ್ಟಿದ್ದೇನೆ ಎಂದು ಹೇಳಿದರು.