Select Your Language

Notifications

webdunia
webdunia
webdunia
webdunia

ಟಿಕ್ ಟಾಕ್ ಗಾಗಿ ಜೀಪಿಗೆ ಬೆಂಕಿ ಇಟ್ಟ ಭೂಪ

ಟಿಕ್ ಟಾಕ್ ಗಾಗಿ ಜೀಪಿಗೆ ಬೆಂಕಿ ಇಟ್ಟ ಭೂಪ
ರಾಜಕೋಟ , ಬುಧವಾರ, 4 ಸೆಪ್ಟಂಬರ್ 2019 (17:10 IST)

ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್ಸ್ ಆಗಬೇಕೆಂದು ಯುವಜನತೆ ತರಹೇವಾರಿ ಕೆಲಸ ಮಾಡುತ್ತಿದ್ದಾರೆ. ಭೂಪನೊಬ್ಬ ನಡುರಸ್ತೆಯಲ್ಲೇ ಟಿಕ್ ಟಾಕ್ ಗಾಗಿ ಮಾಡಬಾರದ ಕೆಲಸ ಮಾಡಿ ಇದೀಗ ಕಂಬಿ ಎಣಿಸುವಂತಾಗಿದೆ.

ಆತ ಇಷ್ಟಪಟ್ಟು ತನ್ನ ಜೀಪನ್ನು ಅಲಂಕಾರಗೊಳಿಸಿದ್ದನು. ಆದರೆ ಅವನ ದುರಾದೃಷ್ಟಕ್ಕೆ ಕೊಂಚವೇ ದೂರ ಚಲಿಸಿರೋ ಜೀಪು ಮಾರ್ಗಮಧ್ಯೆದಲ್ಲಿ ಕೈಕೊಟ್ಟಿತು. ಇದರಿಂದ ಆಕ್ರೋಶಗೊಂಡ ಭೂಪನೊಬ್ಬ ರಸ್ತೆಯಲ್ಲೇ ಜೀಪಿಗೆ ಪೆಟ್ರೋಲ್ ಹಾಕಿ ಬೆಂಕಿ ಇಟ್ಟಿದ್ದಾನೆ.

ಈ ವಿಡಿಯೋ ಇದೀಗ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಜೀಪಿಗೆ ಬೆಂಕಿ ಇಟ್ಟ ಭೂಪ ಹಾಗೂ ವಿಡಿಯೋ ಮಾಡಿರೋ ಆತನ ಗೆಳೆಯನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ರಾಜಕೋಟ್ ನಲ್ಲಿ ಈ ಘಟನೆ ನಡೆದಿದ್ದು, ಇಂದ್ರಜೀತ್ ಸಿಂಗ್ ಎಂಬಾತನೇ ತನ್ನ ಜೀಪಿಗೆ ಬೆಂಕಿ ಇಟ್ಟವನಾಗಿದ್ದಾನೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ ಸಿಎಂ ಯಡಿಯೂರಪ್ಪ