ಪುರುಷ ಪ್ರಧಾನ ಸಮಾಜದಲ್ಲಿ ಪುರುಷರ ಆಲೋಚನೆಗಳನ್ನೇ ಮಹಿಳಾ ಆಲೋಚನೆಗಳು ಎಂದು ಬಿಂಬಿಸುವ ಕೆಲಸ ದೇಶದಲ್ಲಿ ಆಗುತ್ತಿದೆ.
12 ನೇ ಶತಮಾನದಲ್ಲಿಯೇ ಶರಣರ ಸರಿಸಮನಾಗಿ ಮಹಿಳೆಯರು ವಚನಗಳನ್ನು ರಚಿಸಿದ್ದಾರೆ. ಹೀಗಂತ ಹಿರಿಯ ಸಾಹಿತಿ, ಚಿಂತಕಿ ಡಾ.ಬಿ.ಟಿ. ಲಲಿತಾ ನಾಯಕ್ ಪ್ರತಿಪಾದಿಸಿದ್ದಾರೆ.
ಕಲಬುರ್ಗಿಯ ವಿಶ್ವ ವಿದ್ಯಾಲಯ ಆವರಣದಲ್ಲಿ ನಡೆಯುತ್ತಿರುವ 85 ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆ ದಿನದಂದು ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ‘ಸ್ತ್ರೀ ಲೋಕ : ತಲ್ಲಣಗಳು’ ಗೋಷ್ಠಿಯ ಅಧ್ಯಕ್ಷತೆವಹಿಸಿ ‘ಬದಲಾಗುತ್ತಿರುವ ಮಹಿಳಾ ಸಂವೇದನೆಗಳು’ಕುರಿತ ವಿಚಾರ ಮಂಡಿಸಿದರು.
ಮಹಿಳೆಯರು ಇದೀಗ ಶೋಷಿತ ಕಾಲಘಟ್ಟದಿಂದ ಹೊರಬಂದಿದ್ದೇವೆ. ಮೀಸಲಾತಿ ಕೊಡಿ ಎಂದು ಕೇಳುವ ಬದಲು, ಎಲ್ಲದಕ್ಕೂ ನಾವು ಶಕ್ತರಾಗಿದ್ದೇವೆ ಎಂಬುದನ್ನು ಸಾರಿ ಹೇಳಬೇಕಿದೆ. ಊಟ, ಬಟ್ಟೆ, ಧಾರ್ಮಿಕ ಆಚರಣೆ ನಮ್ಮಆಯ್ಕೆ. ಇದನ್ನು ನಮ್ಮ ಸಂವಿಧಾನವೇ ನಮಗೆ ಕೊಟ್ಟಿದೆ. ಆದರೆ ಅದು ಬೇಡ, ಇದು ಬೇಡ ಎಂದು ನಮ್ಮ ಮೇಲೆ ಹೇರುವುದನ್ನು ನಾವು ಪ್ರತಿಭಟಿಸಬೇಕಿದೆ ಎಂದಿದ್ದಾರೆ.