Publish Date: Tue, 25 Jul 2023 (15:40 IST)
Updated Date: Tue, 25 Jul 2023 (14:16 IST)
ಒಂದೇ ಸ್ಥಳದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಎರಡು ವಾಹನಗಳು ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಬಳಿ ನಡೆದಿದೆ. ಮಳೆಯಿಂದಾಗಿ ರಸ್ತೆ ತಿರುವು ಗೋಚರಿಸದೆ ವಾಹನಗಳು ಪಲ್ಟಿಯಾಗಿವೆ. ಬಣಕಲ್ ಸಮೀಪ ಹೇಮಾವತಿ ನದಿಗೆ ಶಿಫ್ಟ್ ಹಾಗೂ ಇನೋವಾ ಕಾರು ಪಲ್ಟಿಯಾಗಿದೆ. ಇನೋವಾ ಕಾರು ಪುತ್ತೂರಿನಿಂದ ಚಿಕ್ಕಮಗಳೂರಿಗೆ ಹೋಗುತ್ತಿತ್ತು. ಎರಡು ಕಾರಿನ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.