Select Your Language

Notifications

webdunia
webdunia
webdunia
webdunia

ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ಬೇಡಿಕೆ: ಧಿಂಗಾಲೇಶ್ವರ ಶ್ರೀ ಬೆಂಬಲ

ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ಬೇಡಿಕೆ: ಧಿಂಗಾಲೇಶ್ವರ ಶ್ರೀ ಬೆಂಬಲ
ದಾವಣಗೆರೆ , ಶುಕ್ರವಾರ, 27 ಜುಲೈ 2018 (16:58 IST)
ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ಬೇಡಿಕೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸ್ವಾಮೀಜಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರತ್ಯೇಕ ರಾಜ್ಯದ ಕೂಗಿಗೆ  ಬೆಂಬಲ ನೀಡಲು ಧಿಂಗಾಲೇಶ್ವರ ಸ್ವಾಮಿಗಳು ಮುಂದಾಗಿದ್ದಾರೆ.

ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ ವತಿಯಿಂದ ದಾವಣಗೆರೆ ನಗರದ ತೊಗಟಿವೀರಪ್ಪ ಕಲ್ಯಾಣ ಮಂಟಪ ದಲ್ಲಿ ನಡೆಯುತ್ತಿರುವ ಗುರುಪೂರ್ಣಿಮ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಬಾಲೇ ಹೊಸೂರು ಮಠದ ಧಿಂಗಾಲೇಶ್ವರ ಸ್ವಾಮಿಗಳು ಮಾತನಾಡಿದ್ದಾರೆ. ಉತ್ತರ ಕರ್ನಾಟಕವನ್ನು ಮೈಸೂರು, ತುಮಕೂರು, ಬೆಂಗಳೂರು, ಹಾಸನದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಿ. ಕೇವಲ ದಕ್ಷಿಣ ಕರ್ನಾಟಕದ ಭಾಗಗಳು ಮಾತ್ರ ಅಭಿವೃದ್ಧಿಯಾಗಿವೆ. ಚುನಾವಣಾ ಪೂರ್ವದಲ್ಲಿ ಮಾತ್ರ ಆಶ್ವಾಸನೆ ನೀಡಿ ಸರ್ಕಾರ ರಚನೆಗೊಂಡ ಬಳಿಕ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕಿಡಿಕಾರಿದ್ದಾರೆ. ಉತ್ತರ ಕರ್ನಾಟಕ ವನ್ನ ಬೇಕಾದಾಗ ಮಾತ್ರ ಬಳಕೆ ಮಾಡಿಕೊಂಡಿದ್ದಾರೆ.

ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಿದ್ದಲ್ಲಿ ಪ್ರತ್ಯೇಕ ರಾಜ್ಯಕ್ಕೆ ಎಲ್ಲಾ ಮಠಮಾನ್ಯರಿಂದ ಬೆಂಬಲ ನೀಡುತ್ತೇವೆ. ಸಮಗ್ರ ಕರ್ನಾಟಕದ ನಿಟ್ಟಿನಲ್ಲಿ ಅಭಿವೃದ್ಧಿ ಮಾಡಬೇಕು ಎಂದು ಸರ್ಕಾರಗಳ ವಿರುದ್ದ ಧಿಂಗಾಲೇಶ್ವರ ಶ್ರೀ ಒತ್ತಾಯಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಬುಲೆಟ್ ಬಾಬಾ ಟೆಂಪಲ್ ಎಲ್ಲಿದೆ ಗೊತ್ತಾ...!