Publish Date: Sun, 15 Jul 2018 (19:38 IST)
Updated Date: Sun, 15 Jul 2018 (19:45 IST)
ಶಾಸಕ ಹಾಲಾಡಿ ಮಾತು ಬೆಂಬಲಿಸಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬ್ಯಾಟಿಂಗ್ ಮಾಡಿದ್ದಾರೆ. 104 ಸ್ಥಾನ ಪಡೆದರೂ ನಾವು ಸರಕಾರ ರಚನೆ ಮಾಡಲಾಗಲಿಲ್ಲ. ಅಂಕಿ ಅಂಶದ ಆಧಾರದ ಮೇಲೆ ಸರಕಾರ ರಚನೆ ಆಗಿದೆ. ಈ ಬಗ್ಗೆ ನಾನು ಸದನದಲ್ಲಿ ಸಿಎಂಗೆ ಮಾತನಾಡಿದ್ದೆ. ಸಿಎಂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದಿದ್ದೆ. ಆಗ ರಾಜ್ಯ ಸರಕಾರ ತಾಯಿಯ ಸ್ಥಾನದಲ್ಲಿದೆ ಎಂದಿದ್ದರು ಸಿಎಂ.
ಆದರೆ ಅವರದೇ ಬಜೆಟ್ ನಲ್ಲಿ ಕರಾವಳಿ ಭಾಗಕ್ಕೆ ಮಲತಾಯಿ ಧೋರಣೆ ತೋರಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಬಜೆಟ್ ಸರ್ವವ್ಯಾಪಿಯಾಗಿರಬೇಕು.
ನೊಂದವರಿಂದ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಪ್ರತಿಧ್ವನಿಸುತ್ತದೆ ಎಂದು ಎಚ್ಚರಿಸಿದರು.