Select Your Language

Notifications

webdunia
webdunia
webdunia
Friday, 18 April 2025
webdunia

ಆರ್ಯ ವೈಶ್ಯ ಅಭಿವೃದ್ಧಿ ನಿಗಮಕ್ಕೆ 10 ಕೋಟಿ: ಟಿ.ಎ.ಶರವಣಗೆ ಅಭಿನಂದನೆ

ಆರ್ಯ ವೈಶ್ಯ ಅಭಿವೃದ್ಧಿ ನಿಗಮ
ಬಳ್ಳಾರಿ , ಸೋಮವಾರ, 9 ಜುಲೈ 2018 (18:06 IST)
ಆರ್ಯವ್ಯೆಶ್ಯ ಅಭಿವೃದ್ಧಿ ನಿಗಮಕ್ಕೆ ಬಜೆಟ್ ನಲ್ಲಿ 10 ಕೋಟಿ ಅನುದಾನ ಸರ್ಕಾರದವತಿಯಿಂದ  ಕೊಡಿಸಿದ ವಿಧಾನ ಪರಿಷತ್ ಸದಸ್ಯ ಡಾ.ಟಿ.ಎ.ಶರವಣ ರವರಿಗೆ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಯವರಿಗೆ ಅಭಿನಂದನೆ ಬ್ರಹತ್ ರ್ಯಾಲಿಯನ್ನು  ಬಳ್ಳಾರಿ ಜಿಲ್ಲಾ ಆರ್ಯವ್ಯಶ್ಯ ಸಂಘ ಹಮ್ಮಿಕೊಂಡಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಕೊನೆಯಲ್ಲಿ ಆಭಿನಂದನಾ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಪರಿಷತ್ ಸದಸ್ಯರಿಗೆ ಕಳುಹಿಸಲಾಯಿತು.

ಮನವಿಯಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಚುನಾಯಿತ ಸರ್ಕಾರಗಳು ಅರ್ಯವ್ರೆಶ್ಯ ಸಮಾಜದ ಅಭಿವೃದ್ಧಿ ಗಾಗಿ ಅವಕಾಶ ಕಲ್ಪಿಸಿಲ್ಲ. ನಮ್ಮಜನಾಂಗದಿಂದ ಬಹಳಷ್ಟು ಜನರು ವಿಧಾನಸಭೆಗೆ ಅಯ್ಕೆಯಾದ್ದರೂಜನಾಂಗದ ಅಭಿವೃದ್ಧಿ ಗೆ ಪ್ರಯತ್ನಿಸಿದರು ಯಶಸ್ವಿಯಾಗಿರಲಿಲ್ಲ.

ಪರಿಷತ್ ಸದಸ್ಯ ಟಿ.ಎ.ಶರವಣ ಈ ಸಾಲಿನ ಬಜೆಟ್ನಲ್ಲಿ ಆರ್ಯ ವೈಶ್ಯ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ರೂ. ಅನುದಾನ ತರುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ  ಜಿಲ್ಲಾ ಆರ್ಯ ವೈಶ್ಯ ಸಂಘ ಅಭಿನಂದನೆ ಸಲ್ಲಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯ ನಗರಸಭೆ ಅಧ್ಯಕ್ಷಸ್ಥಾನ: ಕಾಂಗ್ರೆಸ್ ತೆಕ್ಕೆಗೆ