Select Your Language

Notifications

webdunia
webdunia
webdunia
webdunia

ಡಿವೋರ್ಸ್ ಆದ ಮೇಲೂ ಗಂಡ-ಹೆಂಡಿರು ಕಿತ್ತಾಡಿದ್ರೆ ಹೀಗೇ ಆಗೋದು ಅಂತ ಸಿಎಂ ಎಚ್ ಡಿಕೆಗೆ ಸ್ಪೀಕರ್ ಹೇಳಿದ್ದೇಕೆ?!

ಡಿವೋರ್ಸ್ ಆದ ಮೇಲೂ ಗಂಡ-ಹೆಂಡಿರು ಕಿತ್ತಾಡಿದ್ರೆ ಹೀಗೇ ಆಗೋದು ಅಂತ ಸಿಎಂ ಎಚ್ ಡಿಕೆಗೆ ಸ್ಪೀಕರ್ ಹೇಳಿದ್ದೇಕೆ?!
ಬೆಂಗಳೂರು , ಸೋಮವಾರ, 9 ಜುಲೈ 2018 (11:32 IST)
ಬೆಂಗಳೂರು: ಬಜೆಟ್ ಮೇಲಿನ ಪ್ರಶ್ನೋತ್ತರ ಕಲಾಪದಲ್ಲಿ ಸಿಎಂ ಕುಮಾರಸ್ವಾಮಿ ಭಾಷಣ ಮಾಡುತ್ತಿರುವಾಗ ಕೆಲವು ತಮಾಷೆಯ ಪ್ರಸಂಗಗಳು ಎದುರಾದವು.

ಬಿಜೆಪಿ ತಮ್ಮನ್ನು ವಚನ ಭ್ರಷ್ಟ ಎಂದು ಟೀಕಿಸುವುದಕ್ಕೆ ಪ್ರತಿಯಾಗಿ ಸಿಎಂ ಕುಮಾರಸ್ವಾಮಿ ಮತ್ತೆ ತಮ್ಮ 20-20 ಸರ್ಕಾರದ ದಿನಗಳನ್ನು ನೆನಪಿಸುತ್ತಿದ್ದಾಗ ಮಧ್ಯೆ ತಿಳಿಹಾಸ್ಯ ಮಾಡಿದ ಸ್ಪೀಕರ್ ರಮೇಶ್ ಕುಮಾರ್ ವಿಚಿತ್ರ ಉಪಮೆಯೊಂದನ್ನು ನೀಡಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.

ಸಿಎಂ ಮಾತುಗಳನ್ನು ಕೇಳಿ ನಕ್ಕ ಸ್ಪೀಕರ್ ರಮೇಶ್ ಕುಮಾರ್ ‘ನೋಡ್ರೀ.. ಗಂಡ-ಹೆಂಡತಿ ಜಗಳ ಆಡಿದ್ರೆ ಡಿವೋರ್ಸ್ ಆಗುತ್ತೆ. ಡಿವೋರ್ಸ್ ಆದ ಮೇಲೂ ಕಿತ್ತಾಡ್ತಾ ಇದ್ರೆ ಸಂಸಾರದ ವಿಚಾರಗಳೆಲ್ಲಾ ಬೀದಿಗೆ ಬರುತ್ತೆ. ಈಗ ಹಾಗೇ ಆಗಿರೋದು’ ಎಂದು ರಮೇಶ್ ಕುಮಾರ್ ನಗುತ್ತಾ ಹೇಳಿದಾಗ ಇಡೀ ಸದನ ನಗೆಗಡಲಲ್ಲಿ  ತೇಲಿತು. ಆಗ ಸಿಎಂ ಕುಮಾರಸ್ವಾಮಿ, ಸಭಾಧ್ಯಕ್ಷರೇ ನಿಮಗೆ ನಗು ಬರುತ್ತದೆ. ನಾನು 20 ತಿಂಗಳು ಅನುಭವಿಸಿದ ನೋವಿನ ವಿಚಾರ ಹೇಳುತ್ತಿದ್ದೇನೆ ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಶ್ನೋತ್ತರ ಕಲಾಪದ ಫೈಟ್ ಗೆ ಆಡಳಿತ-ವಿರೋಧ ಪಕ್ಷಗಳು ರೆಡಿ