Select Your Language

Notifications

webdunia
webdunia
webdunia
webdunia

ಸಲಾಂ ಆರತಿಯನ್ನು ನಮಸ್ಕಾರ ಆರತಿ ಎಂದು ಬದಲಾಯಿಸಿದ ಧಾರ್ಮಿಕ ದತ್ತಿ ಇಲಾಖೆ

ಸಲಾಂ ಆರತಿಯನ್ನು ನಮಸ್ಕಾರ ಆರತಿ ಎಂದು ಬದಲಾಯಿಸಿದ ಧಾರ್ಮಿಕ ದತ್ತಿ ಇಲಾಖೆ
bangalore , ಶನಿವಾರ, 10 ಡಿಸೆಂಬರ್ 2022 (20:09 IST)
ಟಿಪ್ಪುವಿನ ಹೆಸರಿನಲ್ಲಿ ಮಾಡಲಾಗುತ್ತಿದ್ದ ಸಲಾಂ ಆರತಿಯನ್ನು ನಮಸ್ಕಾರ ಆರತಿ ಎಂದು ಬದಲಾಯಿಸಿದ ಧಾರ್ಮಿಕ ದತ್ತಿ ಇಲಾಖೆಯ ನಿರ್ಣಯ ಸ್ವಾಗತಾರ್ಹ ಎಂದು ಹಿಂದೂ ಜನಜಾಗೃತಿ ಸಮಿತಿ ಅಭಿನಂದಿಸಿದೆ. ಟಿಪ್ಪುವಿನ ಕಾಲದಲ್ಲಿ ಬದಲಾವಣೆ ಆದ ಕಂದಾಯ ಇಲಾಖೆಯ ಪರ್ಶಿಯನ್ ಶಬ್ದ & ಇಸ್ಲಾಮಿಕರಣಗೊಂಡ ನಗರಗಳನ್ನೂ ಮರುನಾಮಕರಣ ಮಾಡಲು ಆಗ್ರಹಿಸಿದ್ಧಾರೆ.  ಸಾವಿರಾರು ದೇವಸ್ಥಾನಗಳನ್ನು ದ್ವಂಸ ಮಾಡಿದ, ನೂರಾರು ಹಿಂದೂ ಯುವತಿಯರನ್ನು ಶೋಷಣೆ ಮಾಡಿ ಮತಾಂತರ ಯತ್ನಿಸಿದ ಕ್ರೂರಿ ಟಿಪ್ಪು ಸುಲ್ತಾನನು ಆತನ ಕಾಲದಲ್ಲಿ ದೇವಸ್ಥಾನಗಳಲ್ಲಿ  'ಸಲಾಂ ಆರತಿ' ಯನ್ನು ಪ್ರಾರಂಭಿಸಿದ್ದನು. ಇಂದಿನವರೆಗೂ ಅವನ ಹೆಸರಿನಲ್ಲಿ ಈ ಆರತಿ ನಡೆಯುತ್ತಿದ್ದು ಇದು ಅತ್ಯಂತ ಖೇದಕರ ಸಂಗತಿಯಾಗಿತ್ತು. ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯು ಮರುನಾಮಕರಣ ಮಾಡಿ ಅದನ್ನು 'ನಮಸ್ಕಾರ ಆರತಿ' ಎಂದು ಮಾಡಿದೆ. ಈ ನಿರ್ಣಯವು ಅತ್ಯಂತ ಸ್ವಾಗತವಾಗಿದ್ದು ಹಿಂದೂ ಜನಜಾಗೃತಿ ಸಮಿತಿಯು ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನೆರಡು ದಿನ ನಗರ ಫುಲ್ ಕೂಲ್‌ ಕೂಲ್