Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರ ಗಡಿವಿವಾದದ ಬಗ್ಗೆ ಅಮಿತ್ ಷಾ ಜೊತೆಗೆ ಮಾತನಾಡಿದೇವೆ- ಸಿಎಂ

ಮಹಾರಾಷ್ಟ್ರ ಗಡಿವಿವಾದದ ಬಗ್ಗೆ ಅಮಿತ್ ಷಾ ಜೊತೆಗೆ ಮಾತನಾಡಿದೇವೆ- ಸಿಎಂ
bangalore , ಶನಿವಾರ, 10 ಡಿಸೆಂಬರ್ 2022 (16:42 IST)
ಮಹಾರಾಷ್ಟ್ರ ಗಡಿ ವಿವಾದ ವಿಚಾರವಾಗಿ ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ‌ ಹೇಳಿದಾರೆ.ಸೋಮವಾರ ನಮ್ಮ ಸಂಸದರ ನಿಯೋಗ ಅಮಿತ್ ಷಾ ಭೇಟಿಗೆ ಹೇಳಿದ್ದೇನೆ.ನಾನೇ ಅಮಿತ್ ಷಾ ಜೊತೆಗೆ ಮಾತಾಡಿದ್ದೇನೆ.ನಾನು ಹೇಳಿ ಕಳುಹಿಸುತ್ತೇನೆ, ಇನ್ನು ಎರಡು ಮೂರು ದಿನಗಳಲ್ಲಿ ನೀವು ಬರಬೇಕಾಗುತ್ತದೆ ಅಂತಾ ಅಮಿತ್ ಷಾ ಹೇಳಿದ್ದಾರೆ.ಮಹಾರಾಷ್ಟ್ರ ಸಿಎಂ ಮತ್ತು ನನ್ನನ್ನು ಕರೆಯುವುದಾಗಿ ಹೇಳಿದ್ದಾರೆ.ಬಹುತೇಕ 14 ಅಥವಾ 15 ರಂದು ಆ ಸಭೆ ನಡೆಯಲಿದೆ.ಕರ್ನಾಟಕದ ನಿಲುವು ಮತ್ತು ವಾಸ್ತವಾಂಶವನ್ನು ನಾನು ಅವರಿಗೆ ತಿಳಿಸಿದ್ದೇನೆ.ಎಲ್ಲಾ ವಿವರಗಳನ್ನು ಕೂಡಾ ಕೊಟ್ಟಿದ್ದೇನೆ.ನಾನೂ ಕೂಡಾ ಹೋಗಿ ಕರ್ನಾಟಕದ ನಿಲುವನ್ನು ಪ್ರತಿಪಾದಿಸುತ್ತೇನೆ ಎಂದು ಸಿಎಂ ಹೇಳಿದ್ರು.
 
ಇನ್ನು ಈ ವೇಳೆ ಕನ್ನಡ ನಾಡು ಕಂಡಂತಹ ಶ್ರೇಷ್ಠ ನಾಯಕ ಎಸ್ ನಿಜಲಿಂಗಪ್ಪನವರು ಅವರ ಸ್ಮರಣಾರ್ಥವಾಗಿ ಇವತ್ತು ಆಚರಣೆ
ಮಾಡುತ್ತಿದ್ದೇವೆ.ಒಬ್ಬ ಕನ್ನಡ ನಾಡಿನ ಪುತ್ರ ಇಡೀ ನಾಡಿಗೆ ಜೀವವನ್ನು ಮೀಸಲಿಟ್ಟವರು.ಕನ್ನಡ ಭಾಷೆಗೆ ಅವರು ಮಾಡಿದ ಸೇವೆ ಕರ್ನಾಟಕ ಆಗಲು ಕಾರಣ .ರಾಜ್ಯಕ್ಕೆ ಆಡಳಿತದ ಭದ್ರಬುನಾದಿ ಕೊಟ್ಟು ಜನಪರ ಆಡಳಿತ ಮಾಡಲು ನಾಂದಿ ಹಾಡಿದವರು.ನಿಜಲಿಂಗಪ್ಪನವರು ತತ್ವ ಆದರ್ಶ ಎಲ್ಲರಿಗೂ ಮಾದರಿ.ಮೌಲ್ಯ ಆಧಾರಿತ ರಾಜಕಾರಣ ಕರ್ನಾಟಕದಲ್ಲಿ ಮಾಡಿದವರು ನಿಜಲಿಂಗಪ್ಪನವರು.ಭಾರತ ದೇಶದಲ್ಲಿ ಅವರ ಒಂದು ಖ್ಯಾತಿ ಇತ್ತು, ಪ್ರಭಾವ ಇತ್ತು .ಸಂವಿಧಾನ ರಚನಾ ಸಮಿತಿಯಿಂದ ಹಿಡಿದು ಎಐಸಿಸಿ ಅಧ್ಯಕ್ಷರಾಗುವವರೆಗೂ ಭಾರತದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು .ಆಡಳಿತ ಸುಧಾರಣೆಗೆ ಬಹಳ ಮಹತ್ವವನ್ನು ಕೊಟ್ಟವರು.ನೀರಾವರಿಗೆ ಸಾಕಷ್ಟು ಒತ್ತುಕೊಟ್ಟವರು.ಕರ್ನಾಟಕಕ್ಕೆ ಬಹಳ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ.ಅವರು ಮನಸ್ಸು ಮಾಡಿದ್ದರೆ ರಾಷ್ಟ್ರಪತಿ ಆಗಬಹುದಿತ್ತು.ಎಲ್ಲರ ಹಂಬಲವೂ ಇತ್ತು.ಆದರೆ ಅವರು ಒಪ್ಪಲಿಲ್ಲ,, ಯಾವತ್ತೂ ಅಧಿಕಾರದ ಹಿಂದೆ ಹೋದವರಲ್ಲ.ಅವರ ಹಿಂದೆಯೇ ಅಧಿಕಾರ ಬಂದಿದ್ದು .ನಮಗೆಲ್ಲರಿಗೂ ನಿಜಲಿಂಗಪ್ಪನವರು ಆದರ್ಶ ಎಂದು ಸಿಎಂ ಹೇಳಿದ್ರು
 

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನದ ವ್ಯಾಪಾರಿಯಿಂದ ಸುಲಿಗೆ ಆರೋಪದಾಡಿ ಇಬ್ಬರ ಸಸ್ಪೆಂಡ್