ಬೆಂಗಳೂರಿನ ರಸ್ತೆಗಳಲ್ಲಿ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದೀವಿ.ವೈಟ್ ಟಾಪಿಂಗ್ ರಸ್ತೆಗಾಗಿ ಬಹಳಷ್ಟು ಟ್ರಾಫಿಕ್ ಆಗುತ್ತಿತ್ತು.ರಿಪೇರಿ ಇದ್ದಾಗಲೂ ಕೆಲಸ ಮಾಡುವುದು ದೊಡ್ಡ ಸವಾಲಾಗಿತ್ತು.ಹೊಸ ಟೆಕ್ನಾಲಜಿ ಮೂಲಕ ರ್ಯಾಪಿಡೋ ರೋಡ್ ಮಾಡಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಇನ್ನು ಪ್ರಾಯೋಗಿಕವಾಗಿ ರ್ಯಾಪಿಡೋ ರೋಡ್ ಮಾಡಲಾಗಿದೆ.300 ಮೀಟರ್ ರಸ್ತೆ ರೆಡಿಯಾಗಿದೆ.20 ಟನ್ ಮೇಲೆ ಇರುವ ವಾಹನಗಳನ್ನ ಸಂಚಾರ ಮಾಡಲು ಅವಕಾಶ ಇದೆ.ಈ ಬಗ್ಗೆಯೂ ಟೆಸ್ಟ್ ಆಗಿ ರಿಪೋರ್ಟ್ ಕೇಳಲಾಗಿದೆ.ತಾಂತ್ರಿಕ ಮಾಹಿತಿ ಕೊಡಲು ಸಹ ಕೇಳಲಾಗಿದೆ.ಹಣದ ಖರ್ಚು ಬಗ್ಗೆಯೂ ಗಮನ ಇರಬೇಕು.ಕ್ವಾಲಿಟಿ , ಹಣ ,ಟ್ರಾಫಿಕ್ ಸಮಸ್ಯೆ ಇರಬಾರದೆಂದು ಸೂಚನೆ ಕೊಡಲಾಗಿದೆ ಎಂದು ಸಿಎಂ ಹೇಳಿದ್ರು.