Select Your Language

Notifications

webdunia
webdunia
webdunia
webdunia

ನಿಶ್ಚಿತವಾಗಿ ೧೪೦ ಶೀಟ್ ಗೆದ್ದು ಅಧಿಕಾರಕ್ಕೆ ಬರ್ತೆವೆ- ಮಾಜಿ ಸಿಎಂ ಯಡಿಯೂರಪ್ಪ

We will definitely win 140 seats and come to power
bangalore , ಗುರುವಾರ, 8 ಡಿಸೆಂಬರ್ 2022 (15:15 IST)
ಪ್ರಧಾನಿ ನೇತೃತ್ವದ ಯೋಜನೆಗಳು ಗುಜರಾತ್ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.ಗುಜರಾತ್ ನಲ್ಲಿ ದಾಖಲೆ ಗೆಲವು.ಮೋದಿ ಜನಪ್ರಿಯತೆ ಎದ್ದು ಕಾಣ್ತಿದೆ.ಹಿ. ಪ್ರದೇಶದಲ್ಲಿ ಪ್ರತೀ ಐದು ವರ್ಷಗಳಿಗೊಮ್ಮೆ ಸರ್ಕಾರ ಬದಲಾಗ್ತಿದೆ.ಇನ್ನೂ ಅಧಿಕೃತ ಫಲಿತಾಂಶ ಬಂದಿಲ್ಲ.ಕರ್ನಾಟಕದಲ್ಲಿ 140 ಕ್ಕೂ ಹೆಚ್ಚು ಸೀಟು ಗೆಲ್ತೇವೆ.ನಮಗೆ ಹೆಚ್ಚು ಶಕ್ತಿ ಸಿಕ್ಕಿದೆ ಎಂದು ಬಿ‌ಎಸ್ ಯಡಿಯೂರಪ್ಪ ಹೇಳಿದ್ದಾರೆ.
 
ಇನ್ನೂ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ವಿಚಾರವಾಗಿ ಯಡಿಯೂರಪ್ಪ ಮಾತನಾಡುದ್ದು,ಟಿಕೆಟ್ ವಿಚಾರ ಮಾತನಾಡುಹುದು ಬಹಳ ಬೇಗ ಆಗುತ್ತೆ.ಅಮೀತ್ ಶಾ, ನರೇಂದ್ರ ಮೋದಿ ತೀರ್ಮಾನ ಮಾಡ್ತಾರೆ.ಯಡಿಯೂರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲ್ಲ .ಯಡಿಯೂರಪ್ಪ ಎಲ್ಲಿಯೂ ಹೋಗಿಲ್ಲ,ಇಲ್ಲೆ ಇದ್ದೇನೆ.ಈಗಾಗಲೇ ರಾಜ್ಯದ ಪ್ರವಾಸ ಮಾಡ್ತಾ ಇದ್ದೇನೆ.ಶಕ್ತಿಮೀರಿ ಸಂಘಟನೆ ಮಾಡ್ತಾ ಇದ್ದೇವೆ.ಹಗಲು ರಾತ್ರಿ ಎನ್ನದೆ ರಾಜ್ಯದ ಪ್ರವಾಸ ಮಾಡ್ತಾ ಇದ್ದೇವೆ.ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಪ್ರಯತ್ನ ನಡೆಸಿದ್ದೇವೆ.ಕರ್ನಾಟಕದಲ್ಲಿ ನಮ್ಮದೇಯಾದ ಶಕ್ತಿಯಿದೆ.ಕಾರ್ಯಕರ್ತರು ಇದ್ದಾರೆ, ಅವರನ್ನು ಬೆಳಸಿದ್ದೇವೆ.ನಿಶ್ಚಿತವಾಗಿ ೧೪೦ ಶೀಟ್ ಗೆದ್ದು ಅಧಿಕಾರಕ್ಕೆ ಬರ್ತೆವೆ  ಎಂಬ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿಯರಿಗೆ ಹನಿಮೂನ್ ಹೇಗಿರುತ್ತೆ ಎಂದು ಕೇಳಿದ ಶಿಕ್ಷಕ!