Select Your Language

Notifications

webdunia
webdunia
webdunia
Friday, 4 April 2025
webdunia

ಬೆಂಗಳೂರಿನಲ್ಲೊಬ್ಬ ಸೈಕೋಪಾಥ್ ಮಾದಕವ್ಯಸನಿ ಗಂಡನಿಂದ ಪತ್ನಿಗೆ ಕಿರುಕುಳ

Harassment of wife by a psychopathic drug addict husband in Bangalore
bangalore , ಶನಿವಾರ, 10 ಡಿಸೆಂಬರ್ 2022 (17:00 IST)
ಪತ್ನಿಯನ್ನ ಗೆಳೆಯರೊಂದಿಗೆ ಮಲಗಿಸಿ ವಿಡಿಯೋ ಚಿತ್ರಿಕರಿಸಿ ಪತಿ ವಿಕೃತಿ ಮೆರಯುತ್ತಿದ್ದ.ಸಂಪಿಗೆಹಳ್ಳಿ ನಿವಾಸಿಯಾಗಿರೋ ಜಾನ್ ಪಾಲ್ ಎಂಬ ಸೈಕೋಪಾಥ್ ನಿಂದ ಕೃತ್ಯ ನಡೆದಿದ್ದು.2011 ರ ಏಪ್ರಿಲ್ ನಲ್ಲಿ ಜಾನ್ ಪಾಲ್ ನನ್ನ ಮಹಿಳಾ ಟೆಕ್ಕಿ ವಿವಾಹವಾಗಿದ್ದಳು.2015 ರಿಂದ ತನ್ನ  ಆರೋಪಿ ಪತಿ ಜಾನ್ ಪಾಲ್ ವಿಕೃತಿ ಶುರುಮಾಡಿದ.
 
ಮನೆಗೆ ತನ್ನ ಗೆಳೆಯರನ್ನ ಕರೆದು ಪಾರ್ಟಿ ಮಾಡಿ ಗೆಳೆಯರೊಂದಿಗೆ ಬೆಡ್ ಶೇರ್ ಮಾಡು ಎಂದ ಪತಿ ಹೇಳಿದ.ಪತಿಯ ಹಲ್ಲೆ
 
ತಾಳಲಾರದೇ ಆತನ ಗೆಳೆಯರೊಂದಿಗೆ ದೈಹಿಕ ಸಂಪರ್ಕಕ್ಕೆ  ಮಹಿಳಾ ಟೆಕ್ಕಿ ಒಪ್ಪಿದಳು.ತನ್ನ ಸ್ನೇಹಿತರಾದ ಸಜೀಶ್ ಹಾಗೂ ನಾಜಿ ಎಂಬುವವರ ಜೊತೆ ಪತ್ನಿಯನ್ನ ಆರೋಪಿ ಮಲಗಿಸಿದ.ಸ್ವಂತ ಪತ್ನಿಯನ್ನ ಗೆಳೆಯರೊಂದಿಗೆ ಮಲಗಿಸಿ ಪೊಟೋ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ.ಪತ್ನಿಯ ಮೇಲೆ ವಿಕೃತಿ ಮೆರೆದಿದ್ದಲ್ಲದೇ ಪತ್ನಿಯ ತಂಗಿಯನ್ನು ತನ್ನೊಡನೆ ಮಲಗುವಂತೆ ಕಿರುಕುಳ ನೀಡುತ್ತದ್ದ.
 
ಗಂಡನ ಕಿರುಕುಳಕ್ಕೆ ಬೇಸತ್ತು ವಿಚ್ಚೇಧನ ನೀಡಲಿಕ್ಕೆ ಮಹಿಳಾ ಟೆಕ್ಕಿ ಮುಂದಾಗಿದ್ದಾಳೆ.ಈ ವೇಳೆ ಪತ್ನಿ ತನ್ನ ಗೆಳೆಯರೊಂದಿಗಿನ ಅಶ್ಲೀಲ ಪೊಟೋ ವಿಡಿಯೋ ವೈರಲ್ ಮಾಡೋದಾಗಿ ಬ್ಲಾಕ್ ಮೇಲ್ ಮಾಡಿದ.ಸೈಕೋಪಾಥ್ ಜಾನ್ ಪಾಲ್ ಗಾಂಜಾ ವ್ಯಸನಿಯಾಗಿದ್ದು.ಮನೆಯಲ್ಲಿಯೇ ಗಾಂಜಾ ಸಸಿಗಳನ್ನ ಫಾಟ್ ಗಳಲ್ಲಿ ಬೆಳೆದಿದ್ದಾನೆಂದು ದೂರು ನೀಡಲಾಗಿದೆ.ನೊಂದ ಪತ್ನಿಯಿಂದ ಸಂಪಿಗೆಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ.ದೂರಿನನ್ವಯ ಲೈಂಗಿಕ ಕಿರುಕುಳ, ಎನ್.ಡಿ.ಪಿ.ಎಸ್ ಹಾಗೂ ಐಟಿ ಆಕ್ಟ್ ಅಡಿ ಕೇಸ್ ದಾಖಲು ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರ ಗಡಿವಿವಾದದ ಬಗ್ಗೆ ಅಮಿತ್ ಷಾ ಜೊತೆಗೆ ಮಾತನಾಡಿದೇವೆ- ಸಿಎಂ