Select Your Language

Notifications

webdunia
webdunia
webdunia
webdunia

ಸ್ಮಾರ್ಟ್ ಲುಕ್ನಲ್ಲಿ ಶಿವಾಜಿ ನಗರ

Shivaji Nagar in smart look
bangalore , ಶನಿವಾರ, 10 ಡಿಸೆಂಬರ್ 2022 (19:50 IST)
ಬೆಂಗಳೂರಿನಲ್ಲಿ ಶಿವಾಜಿನಗರದ ಹೆಸರನ್ನು ಕೇಳದೇ ಇರೋರಿಲ್ಲ. ಸದಾ ಜನಜಂಗುಳಿಯಿಂದ ತುಂಬಿರುವ ಕರ್ಮರ್ಷಿಯಲ್‌ ಸ್ಟ್ರೀಟ್‌ ಶಾಪಿಂಗ್‌ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ. ಆದ್ರೆ ಅಲ್ಲಿನ ಕಿರಿದಾದ ರಸ್ತೆ ಓಡಾಡಲೂ ಜಾಗವಿಲ್ಲದಂತೆ ಎಲ್ಲಿ ನೋಡಿದ್ರೂ ಪಾರ್ಕ್‌ ಮಾಡಿರುವ ವೆಹಿಕಲ್‌ ಗಳು, ರಸೆಲ್‌ ಮಾರುಕಟ್ಟೆಯ ಅವ್ಯವಸ್ಥೆ, ಚರಂಡಿ ವಾಸನೆ ಜನರಿಗೆ ಕಿರಿಕಿರಿ ಉಂಟುಮಾಡುತ್ತಿದ್ದವು ಅನ್ನೋದು ಅಷ್ಟೇ ಸತ್ಯ. ಆದ್ರೆ ಶೀಘ್ರವೇ ಶಿವಾಜಿನಗರ ಸ್ಮಾರ್ಟ್‌ ನಗರವಾಗಲಿದೆ. ಹೌದು, ಸ್ಮಾರ್ಟ್ ಸಿಟಿ ಬೆಂಗಳೂರು ಲಿಮಿಟೆಡ್ ಅಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಿವಾಜಿ ನಗರಕ್ಕೆ ಹೊಸ ರೂಪ ನೀಡುತ್ತಿದೆ. ಈಗಾಗಲೇ ಕಾಮಗಾರಿ ಶೇ.70 ರಷ್ಟು ಪೂರ್ಣಗೊಂಡಿದೆ. ಸಂಕ್ರಾಂತಿ ಹಿನ್ನೆಲೆಯಲ್ಲಿ ಜನವರಿ 15 ರಂದು ಇದನ್ನು ಉದ್ಘಾಟನೆ ಮಾಡಲು ತಯಾರಿ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಕಾನಿಕಲ್ ಮೀಟರ್ ಗಳನ್ನು ಡಿಜಿಟಲ್ ಮೀಟರ್ ಗೆ ಬದಲಿಸುವ ಕಾರ್ಯ