Publish Date: Sat, 10 Dec 2022 (19:56 IST)
Updated Date: Sat, 10 Dec 2022 (20:04 IST)
ಒಂದೆಡೆ ಚುಮುಚುಮು ಚಳಿ, ಮತ್ತೊಂದೆಡೆ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಯಾವ ರೀತಿ ವಾತಾವರಣ ಇರುತ್ತದೆಯೋ ಅದೇ ರೀತಿ ವಾತಾವರಣ ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಡುಬಂತು . ಬೆಂಗಳೂರಿನಲ್ಲಿ ಇಂದು ಮುಂಜಾನೆಯಿಂದಲೇ ಜಿಟಿಜಿಟಿ ಮಳೆಯಾಗುತ್ತಿದೆ. ನಿನ್ನೆಯಿಂದಲೇ ಮಳೆ ಆರಂಭವಾಗಿದ್ದು ಅದಿನ್ನೂ ನಿಂತಿಲ್ಲ, ಬೆಳ್ಳಂಬೆಳಗ್ಗೆ ಆಫೀಸು, ಕಚೇರಿ, ಕೆಲಸ ಕಾರ್ಯ, ಶಾಲಾ-ಕಾಲೇಜುಗಳಿಗೆ ಹೋಗುವವರು ಮಳೆರಾಯನಿಗೆ ಬೈಯುತ್ತಾ ಮನೆಯಿಂದ ಕೊಡೆ ಹಿಡಿದುಕೊಂಡು,ಶ್ವೆಟರ್, ಟೊಪ್ಪಿ, ರೈನ್ ಕೋಟ್ ಧರಿಸಿ ಹೊರಬಂದಿದ್ದಾರೆ. ಅದರ ಜೊತೆಗೆ ಮಂಜು ಕವಿದ ವಾತಾವರಣವೂ ನಿರ್ಮಾಣವಾಗಿದೆ. ಇನ್ನು ಸಿಲಿಕಾನ್ ಸಿಟಿಯಲ್ಲಿ ಕೊಂಚ ದಿನಗಳ ಕಾಲ ಮಳೆಯಿಂದ ತಪ್ಪಿಸಿಕೊಂಡಿದ್ದ ಜನರಿಗೆ ಮತ್ತೆ ಈಗ ಎರಡೂ ಮೂರು ದಿನಗಳ ಕಾಲ ಮಳೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ