Select Your Language

Notifications

webdunia
webdunia
webdunia
webdunia

ಜಿಮ್ಸ್ ವೈದ್ಯರಿಂದ ಯಡವಟ್ಟು, ಕಿವಿ ಚಿಕಿತ್ಸೆಗೆ ಬಂದಿದ್ದ ಮಹಿಳೆ ಸಾವು

death of a woman
bangalore , ಮಂಗಳವಾರ, 22 ಮಾರ್ಚ್ 2022 (19:15 IST)
ಜಿಮ್ಸ್ ವೈದ್ಯರ ಯಡವಟ್ಟು ಕಿವಿ ಚಿಕಿತ್ಸೆಗೆ (Ear Treatment) ಬಂದ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಗದಗ ತಾಲೂಕಿನ ಕಣವಿ-ಹೊಸೂರು ಗ್ರಾಮದ ಸುಮಿತ್ರ ಬಡಿಗೇರ (35) ಮೃತ ಮಹಿಳೆ. ಕಿವಿಗೆ ಬಿದ್ದಿದ್ದ ದೊಡ್ಡ ತೂತು‌ ಮುಚ್ಚಿಸಿಕೊಳ್ಳಲು ಚಿಕಿತ್ಸೆ ಪಡೆಯಲು ಮಹಿಳೆ ಬಂದಿದ್ದರು. ಹೊಸ ಕಿವಿಯೋಲೆ ಧರಿಸಲು ಶಸ್ತ್ರ ಚಿಕಿತ್ಸೆ ಮೂಲಕ ಕಿವಿ ತೂತು ಮುಚ್ಚಿಸಿಕೊಳ್ಳಲು ಬಂದಿದ್ದಳು. ವೈದ್ಯರ ಯಡವಟ್ಟಿನಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಅಂತ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಯಾವ ಇಂಜೆಕ್ಷನ್ ಕೊಟ್ಟರೋ ಗೊತ್ತಿಲ್ಲ. ಆರಾಮಾಗಿದ್ದಾಕೆ ಸಾವನ್ನಪ್ಪಿದ್ದಾಳೆ ಅಂತ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ನಿ ಕಳೆದುಕೊಂಡು ಎದೆ ಬಡಿದುಕೊಂಡು ಪತಿ ಗೋಳಾಡಿದ್ದು, ಅಂಬ್ಯುಲೆನ್ಸ್ ಚಕ್ರದಡಿ ಸಿಲುಕಿ ಸಾಯಲು ಮೃತ ಮಹಿಳೆ ಪತಿ ಯತ್ನಿಸಿದ್ದಾನೆ. ನನಗೆ ನ್ಯಾಯ ಬೇಕು. ವೈದ್ಯರ ಮೇಲೆ ಕ್ರಮ ಕೈಗೊಳ್ಳಿ ಅಂತ ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಣದುಬ್ಬರದಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್!