Select Your Language

Notifications

webdunia
webdunia
webdunia
webdunia

ಹಣದುಬ್ಬರದಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್!

ಹಣದುಬ್ಬರದಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್!
bangalore , ಮಂಗಳವಾರ, 22 ಮಾರ್ಚ್ 2022 (18:34 IST)
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 50 ರೂ. ಏರಿಕೆಯಾಗಿದ್ದು, ಹೊಸ ಬೆಲೆ ಇಂದಿನಿಂದ (ಮಂಗಳವಾರ) ಅನ್ವಯವಾಗಲಿದೆ. 6 ಅಕ್ಟೋಬರ್ 2021 ರ ನಂತರ ಎಲ್‌ಪಿಜಿ ಸಿಲಿಂಡರ್ ದರಗಳು (Domestic LPG cylinder Price) ಹೆಚ್ಚಿವೆ. ಇಂದಿನಿಂದ ದೆಹಲಿಯಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 899.50 ರಿಂದ 949.5 ಕ್ಕೆ ಏರಿಕೆಯಾಗಿದೆ.
 
ವಾಣಿಜ್ಯ ನಗರಿ ಮುಂಬೈನಲ್ಲಿ ದೇಶೀಯ ಅಡುಗೆ ಅನಿಲ (Domestic LPG cylinder) ಖರೀದಿಗಾಗಿ 949.50 ರೂ. ಪಾವತಿಸಬೇಕಾಗುತ್ತದೆ ಮತ್ತು ಕೋಲ್ಕತ್ತಾದಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಖರೀದಿಸಲು 976 ರೂ. ಪಾವತಿಸಬೇಕಾಗುತ್ತದೆ. ಇದಕ್ಕೂ ಮೊದಲು ಕೋಲ್ಕತ್ತಾದಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 926 ರೂ. ಆಗಿತ್ತು. ಇದಲ್ಲದೇ ಚೆನ್ನೈನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 915.50 ರೂ.ನಿಂದ 965.50 ರೂ.ಗೆ ಹೆಚ್ಚಳವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಟ್ವೀಟ್ ಗೆ ತಿರುಗೇಟು ನೀಡಿದ ಸಿಎಂ