Select Your Language

Notifications

webdunia
webdunia
webdunia
webdunia

ಬಟ್ಟೆಗೆ ಹಾಕುವ ಪಿನ್ ನುಂಗಿದ ಬಾಲಕಿ ಸಾವು

ಬಟ್ಟೆಗೆ ಹಾಕುವ ಪಿನ್ ನುಂಗಿದ ಬಾಲಕಿ ಸಾವು
ಕಲಬುರ್ಗಿ , ಭಾನುವಾರ, 28 ಏಪ್ರಿಲ್ 2019 (17:44 IST)
ಬಟ್ಟೆಗೆ ಹಾಕುವ ಪಿನ್ ನುಂಗಿದ್ದ ಬಾಲಕಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಹಯ್ಯಾಳ ಗ್ರಾಮದಲ್ಲಿ ಘಟನೆ  ನಡೆದಿದೆ. ಪಿನ್ ನುಂಗಿದ್ದ ಎಂಟು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.

8  ವರ್ಷದ ಸಪ್ನ ಮೃತ ದುರ್ದೈವಿಯಾಗಿದ್ದಾಳೆ.

ಏಪ್ರಿಲ್ 22 ರಂದು ಆಹಾರದ ಜೊತೆಗೆ ಅಚಾನಕ್ಕಾಗಿ ಬಟ್ಟೆಗೆ ಹಾಕುವ ಪಿನ್ ನುಂಗಿದ್ದಳು ಬಾಲಕಿ. ಆ ಬಳಿಕ
ಹೈದರಾಬಾದ್ ನ ಯಶೋಧರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾಳೆ.

ಕುರುಕುಂಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಷಾಂತರಿಗಳು ನಾಯಿಗಿಂತ ಕಡೆ ಎಂದೋರಾರು?