ಕುಕ್ಕರ್ ಸಿಡಿದು ಮಗುವಿಗೆ ಗಾಯ

ಶುಕ್ರವಾರ, 9 ನವೆಂಬರ್ 2018 (18:24 IST)
ಕುಕ್ಕರ್ ಸಿಡಿದು ಮಗುವಿಗೆ ಗಾಯವಾಗಿರುವ ಘಟನೆ ನಡೆದಿದೆ.

ಚಿಕ್ಕಮಗಳೂರಿನ ರಾಮನಹಳ್ಳಿ ಅಂಗನವಾಡಿ‌ಯಲ್ಲಿ ಘಟನೆ ನಡೆದಿದೆ. ಅಂಗನವಾಡಿ ಕೇಂದ್ರದಲ್ಲಿದ್ದ ಮಗುವಿಗೆ ಗಾಯವಾಗಿದೆ. ಮಹಮ್ಮದ್ (5) ಗಾಯಗೊಂಡ ಮಗುವಾಗಿದ್ದಾನೆ. ಮಗುವಿನ ತಲೆ ಹಾಗೂ ಕೆನ್ನೆಗೆ ಗಾಯಗಳಾಗಿವೆ.  

ಗಾಯಾಳು ಮಗುವಿಗೆ‌ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅಂಗನವಾಡಿ ಶಿಕ್ಷಕಿ ಹಾಗೂ ಅಧಿಕಾರಿಗಳ ವಿರುದ್ಧ  ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆಗೆ ಶರಣು