ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆಗೆ ಶರಣು

ಶುಕ್ರವಾರ, 9 ನವೆಂಬರ್ 2018 (17:43 IST)
ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಚಡಚಣ ಸಮೀಪದ ಹೊಳೆ ಸಂಖ ಗ್ರಾಮದ ಹೊಲದಲ್ಲಿ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ರೈತ 20 ಲಕ್ಷಕ್ಕೂ  ಅಧಿಕ ಸಾಲ ಮಾಡಿದ್ದನು.

ಕಬ್ಬು ಹಾಗೂ ಬಾಳೆ ಬೆಳೆಗಾಗಿ ವಿಜಯಪುರದ ಬ್ಯಾಂಕ್ ಆಫ್ ಇಂಡಿಯಾದಿಂದ 15 ಲಕ್ಷ ಹಾಗೂ ಊರುಮನೆ ಸಾಲ 5 ಲಕ್ಷ  ಸಾಲ ಮಾಡಿದ್ದನು.

ಮಳೆ ಇಲ್ಲದೆ ಬೆಳೆ ಒಣಗುತ್ತಿರುವದು ಕಂಡು ಸಾಲ ಹೇಗೆ ತಿರಿಸುವದು ಎಂದು ಸಾಲದ ಶೂಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.  

ಸಾಲಕ್ಕೆ ಹೆದರಿ ರೈತ ಮಹಾದೇವಪ್ಪ ಲಿಂಗಪ್ಪ ಬಾಲಗಾಂವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ರೈತನಿಗೆ ಹೆಂಡತಿ ಹಾಗೂ ಒಬ್ಬ ಮಗ,ಒಬ್ಬ ಮಗಳು  ಇದ್ದಾರೆ. ಈ ಕುರಿತು ಪ್ರಕರಣ ಚಡಚಣ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತಮಿಳುನಾಡಿನಲ್ಲಿ ಹೊಸ ರಾಜಕೀಯ ದ್ರುವಿಕರಣ ಆರಂಭ