ತಮಿಳುನಾಡಿನಲ್ಲಿ ಹೊಸ ರಾಜಕೀಯ ದ್ರುವಿಕರಣ ಆರಂಭ

ಶುಕ್ರವಾರ, 9 ನವೆಂಬರ್ 2018 (17:24 IST)
ಡಿಎಂಕೆ ಇರುವ ಯಾವುದೇ ಘಟ್ ಬಂಧನ್ ಜೊತೆ ಶಶಿಕಲಾ ನೇತೃತ್ವದ ತಂಡ ಹೋಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಟಿಟಿವಿ ದಿನಕರನ್ ಸ್ಪಷ್ಟನೆ ನೀಡಿದ್ದಾರೆ.

ಡಿಎಂಕೆ ಹೋದ ಕಡೆ ಜಯಲಲಿತರ ಪಕ್ಷ ಹೋಗುವುದಾದರು ಹೇಗೇ? ಎಂದು ದಿನಕರನ್ ಪ್ರಶ್ನಿಸಿದ್ದಾರೆ.

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಭೇಟಿ ಮಾಡಿದ ಶಾಸಕರ ತಂಡದ ಮುಖಂಡ ಟಿಟಿವಿ ದಿನಕರನ್ ಸ್ಪಷ್ಟನೆ ನೀಡಿದ್ದು, ಇದೀಗ ಅಮಾನತುಗೊಂಡಿರುವ ಹತ್ತು ಶಾಸಕರು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಬದಲಿಗೆ ನೇರವಾಗಿ ಜನರ ಬಳಿ ಹೋಗುವಂತೆ ನಮ್ಮ ನಾಯಕಿ ಶಶಿಕಲಾ ಸೂಚಿಸಿದ್ದಾರೆಂದು ದಿನಕರನ್ ತಿಳಿಸಿದರು.

ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸ್ನೇಹಿತೆ  ಶಶಿಕಲಾರನ್ನು ಭೇಟಿ ಮಾಡಿದ ಅಮಾನತುಗೊಂಡ ಶಾಸಕರುಗಳೊಂದಿಗೆ 1 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಟ ವಿನೋದ್ ರಾಜ್ ಗೆ ಯಾಮಾರಿಸಿದ್ದ ಕಳ್ಳನ ಬಂಧನ